"ಅಪ್ಪನ ರ‍್ಯಾಲೀಸ್ ಸೈಕಲ್ " ದರ್ಶನ್ ಜಯಣ್ಣ ತಮ್ಮ ತಂದೆಯ ಒಡನಾಟದ ನೆನಪಿನಲ್ಲಿ ಕಾಳಜಿ ಮತ್ತು ಪ್ರೀತಿಯಿಂದ ಬರೆದ ಪ್ರಬಂಧಗಳ ಸಂಕಲನ. ಇಲ್ಲಿ ಗ್ರಂಥಿಗೆ ಅಂಗಡಿ ಇಂದ ಮೊದಲುಗೊಂಡು ಅವರ ತಂದೆ ಮಾಡಿದ ನಾನಾ ಕಸುಬುಗಳ, ಅವುಗಳ ತಾಪತ್ರಯಗಳ, ಅವರು ಭೇಟಿಯಾದ ಜನಗಳ ಅವರ ಮುಗ್ಧತೆಯ, ಒಳ್ಳೆಯತನದ ಅನಾವರಣವಿದೆ. ಇದು ಒಂದು ಪುಟ್ಟ ಊರಿನ, ಒಂದು ಕಾಲಘಟ್ಟದ ಕುರಿತಾಗಿದ್ದರೂ ಇದರ ಆಶಯ ಮತ್ತು ಒಡಮೂಡಿರುವ ಮೌಲ್ಯಗಳು ಸಾರ್ವತ್ರಿಕ. ಸರಾಗವಾಗಿ ಓದಿಸಿಕೊಂಡು ಹೋಗುವ ಈ ಪ್ರಬಂಧಗಳು ನಿಮ್ಮನ್ನು ಮುದಗೊಳಿಸುವುದಲ್ಲದೆ ನಿಮ್ಮನ್ನು ಬಹಳ ದಿನ ಕಾಡದೆ ಇರವು!
ಯುವ ಲೇಖಕ ದರ್ಶನ್ ಜಯಣ್ಣ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು (1985), ಆಡಿ ಬೆಳೆದದ್ದು ಶಾಲೆ ಕಲಿತದ್ದು ತುಮಕೂರು. ವೃತ್ತಿಯಿಂದ 'ಕೆಮಿಕಲ್ ಇಂಜಿನಿಯರ್', ಡಿಗ್ರಿ ಪಡೆದದ್ದು RVCE ಬೆಂಗಳೂರು (2006). ಮೊದಲಿಗೆ ಮಂಗಳೂರಿನ MCF ನಲ್ಲಿ ಪ್ರೊಡಕ್ಷನ್ ಇಂಜಿನಿಯರ್ ಆಗಿ ಕೆಲಸ ನಂತರ ಬೆಂಗಳೂರಿನ GE ಮತ್ತು SABIC ತಂತ್ರಜ್ಞಾನ ಕೇಂದ್ರಗಳಲ್ಲಿ ಸಂಶೋಧಕನಾಗಿ ಕೆಲಸ. ಕಳೆದ ಕೆಲವು ವರ್ಷಗಳಿಂದ ಸೌದಿಯ SABIC ಪೆಟ್ರೋಕೆಮಿಕಲ್ಸ್ ನಲ್ಲಿ 'ಹಿರಿಯ ವಿಜ್ಞಾನಿಯಾಗಿ' ಕಾರ್ಯ ನಿರ್ವಹಣೆ. ಮೊದಲ ಪ್ರಯತ್ನ "ಪದ್ಯ ಸಿಕ್ಕಿತು" ಎಂಬ ಕವನ ಸಂಕಲನ (2018). ವೈವಿಧ್ಯ ಓದು ಮತ್ತು ದೇಶ ಸುತ್ತುವುದು ...
READ MOREಅಪ್ಪ ಯಾವ ಸಂಶೋಧನೆಯ ವಿದ್ಯಾರ್ಥಿಯಾಗಿರದಿದ್ದರೂ ಕೂಡ, ಗಿಡಮೂಲಿಕೆಗಳ ಆಧಾರಗಳನ್ನು ಮತ್ತು ಅವುಗಳ ಉಪಯುಕ್ತತೆಗಳನ್ನು ಹಳೆಯ ಗ್ರಂಥಗಳಲ್ಲಿ ಹುಡುಕುತ್ತಿದ್ದ ಪರಿ ನನ್ನನ್ನು ಹಲವು ಬಾರಿ ಆಶ್ಚರ್ಯಚಕಿತನನ್ನಾಗಿ ಮಾಡಿದೆ. ಪುಟ್ಟ ಊರೊಂದರ ಗ್ರಂಥಿಗೆ ಅಂಗಡಿಯ ಅಪ್ಪ ಕೆಲವೊಮ್ಮೆ ರಾತ್ರಿ ಎಲ್ಲಾ ಟೇಬಲ್ ಲ್ಯಾಂಪ್‌ನ ಅಡಿಯಲ್ಲಿ ಆಧಾರ ಹುಡುಕುತ್ತಿದ್ದು, ಬೆಳಿಗ್ಗೆ ಅದರ ಬಗ್ಗೆ ತನ್ನನ್ನು ಅರಸಿ ವಾತ, ಪಿತ್ತ, ಕಫ ಮುಂತಾದವುಗಳ ನಿವಾರಣೆಗೆ ಬಂದ ಹಳ್ಳಿಯವರಿಗೆ ಕುತೂಹಲದಿಂದ ಹೇಳುತ್ತಿದ್ದದ್ದು ಕಣ್ಣಿಗೆ ಕಟ್ಟಿದ ಹಾಗಿದೆ. ಅಪ್ಪ ತನ್ನಂತೆಯೇ ಬದುಕಿ, ತನಗೇನು ಅನಿಸುವುದೋ ಅದನ್ನೇ ಮಾಡಿ, ಯಾರ ಮರ್ಜಿಗೂ ಮುಲಾಜಿಗೂ ಬೀಳದೆ, ಯಾರಿಗೂ ತಲೆಬಾಗದೆ, ಪೂಜಾ ಸಾಮಗ್ರಿ ಅಂಗಡಿ ಮತ್ತು ಮಠಗಳ ಊರಿನಲ್ಲಿ ಇದ್ದರೂ ಸ್ವಾಮಿಗಳ ಹಿಂದೆ ಬೀಳದೆ, ಐನೋರುಗಳಿಗೆ ಒಂದು ರೂಪಾಯಿಯೂ ಕಮಿಷನ್ ಕೊಡದೆ ತನ್ನಷ್ಟಕ್ಕೆ ತಾನು ಎಂಬAತೆ ಇದ್ದುಬಿಟ್ಟ ಆಸಾಮಿ. ಇದರ ಜೊತೆ ಜೊತೆಗೆ ತನ್ನ ಆರೋಗ್ಯದ ಕಡೆಗೆ ಸರಿಯಾಗಿ ಗಮನ ಕೊಡದೆ ತಿನ್ನುವಾಗ ತಿನ್ನದೆ, ತೊಡುವಾಗ ತೊಡದೆ, ವಿಲಾಸಿಯಾಗದೆ, ಹೆಂಡತಿ ಮಕ್ಕಳ ಕಾಳಜಿಗೆ ಎಂದೂ ಕಿವಿಗೊಡದೆ ಬದುಕಿದ ಸೀದಾ ಸಾದಾ ಮನುಷ್ಯ. He was a very complex character!