ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು ಬರೆದ ಕೃತಿ-ವರ್ಧಾಯಾತ್ರೆ. 1939 ಹಾಗೂ 1942 ರಲ್ಲಿ ಮೊದಲ ಹಾಗೂ ದ್ವಿತೀಯ ಮುದ್ರಣ ಕಂಡಿದ್ದು, ಈಗಿನದು ತೃತೀಯ ಆವೃತ್ತಿ. ಈ ಕೃತಿಗೆ ಇಬ್ಬರು ಸಾಹಿತಿಗಳ ಮುನ್ನುಡಿ ಇದೆ. ತಿರುಮಲೆ ತಾತಾಚಾರ್ಯ ಶರ್ಮ ಅವರು ‘ರಾಷ್ಟ್ರಭಾರತದ ಜೀವನ, ದರ್ಶನ ಪಾತ್ರ ಪರಿಚಯ ಮಾಡಿಕೊಳ್ಳಲು ಇರುವ ಸಾಹಿತ್ಯ ಸ್ವಲ್ಪ. ಆದ್ದರಿಂದ, ಗಾಂಧೀಜಿ ಅವರ ಸತ್ಯಶೋಧನೆ, ಜವಾಹರಲಾಲ್ ನೆಹರು ಅವರ ಆತ್ಮಕಥೆ, ಪಟ್ಟಾಭಿ ಅವರು ಕಾಂಗ್ರೆಸ್ ಇತಿಹಾಸ ಜೊತೆಗೆ ಓದಬೇಕಾದ ಪುಸ್ತಕವಿದು ಎಂದು ಪ್ರಶಂಸಿಸಿದ್ದರೆ, ಕವಿ ದ.ರಾ. ಬೇಂದ್ರೆ ಅವರು ‘ವರ್ಧಾಯಾತ್ರೆಯು ತಿಳಿವುನಲ್ಲಿ ತಾತ್ವಿಕ ಗ್ರಂಥ. ರೀತಿಯಲ್ಲಿ ಉತ್ತಮ ಸಾಹಿತ್ಯ, ವರ್ಧಾಯಾತ್ರೆಯು ಇಂದಿನ ಮಹಾಭಾರತದ, ಜಾಗೃತ ಜೀವನದ ಇತಿಹಾಸದ ಸೆರಗು. ವಿಭೂತಿ ಇರದ ಸ್ಥಳವು ಯಾತ್ರಾ ಸ್ಥಳವಲ್ಲ, ದೋಷ ತಗ್ಗಿಸಿ ಗುಣ ಹಿಗ್ಗಿಸದ ಯಾತ್ರೆಯೂ ಯಾತ್ರೆಯಲ್ಲ. ಶರ್ಮ ಅವರ ವರ್ಧಾಯಾತ್ರೆಯು ಓದುಗರಲ್ಲಿ ಈ ಪರಿಣಾಮ ಮಾಡದೇ ಬಿಡದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಸಿದ್ದವನಹಳ್ಳಿ ಕೃಷ್ಣಶರ್ಮ ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯವರು. ಅವರು 1904 ಜುಲೈ 31ರಂದು ಜನಿಸಿದರು. ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ. ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶ ಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆಗೆ ಒಳಗಾಗಿದ್ದರು. ಕನ್ನಡ ಪತ್ರಿಕೋದ್ಯಮದ ಏಳ್ಗೆಗೆ ಶ್ರಮಿಸಿದವರಲ್ಲಿ ಸಿದ್ಧವನಹಳ್ಳಿ ಪ್ರಮುಖರು. ಕನ್ನಡದಲ್ಲಿ ’ಹರಿಜನ’ ಪತ್ರಿಕೆ ಪ್ರಕಟಿಸಿದ ಅವರು ’ವಿಶ್ವ ಕರ್ನಾಟಕ’ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ...
READ MORE