ನಾ ಕಂಡಂತೆ ತೇಜಸ್ವಿ-ಶಾಮಣ್ಣ

Author : ಕಡಿದಾಳ್‌ ಪ್ರಕಾಶ್

Pages 136

₹ 130.00




Year of Publication: 2023
Published by: ಅಭಿರುಚಿ ಪ್ರಕಾಶನ
Address: #36, 14ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತಿಪುರಂ, ಮೈಸೂರು- 570009
Phone: 9980560013

Synopsys

‘ನಾ ಕಂಡಂತೆ ತೇಜಸ್ವಿ-ಶಾಮಣ್ಣ’ ಕಡಿದಾಳ್‌ ಪ್ರಕಾಶ್ ಅವರ ಕೃತಿಯಾಗಿದೆ. ಆತ್ಮಚರಿತ್ರೆ ಜೀವನಚರಿತ್ರೆ ಅನುಭವಕಥನಗಳಂತೆಯೇ ನೆನಪುಗಳ ಕಥನವೂ ಪ್ರಬಂಧ ಸಾಹಿತ್ಯಕ್ಕೆ ಸೇರುವ ಪ್ರಕಾರ. ಇಂಥ ಸ್ಮೃತಿ ಕಥನಕ್ಕೆ ಬೇಕಾದ್ದು ಮೊದಲಿಗೆ ಜೀವನಾನುಭವ, ನಂತರ ನೆನಪಿನ ಶಕ್ತಿ ಮತ್ತು ನಿರೂಪಣೆಯ ಕಲೆ. ಕಡಿದಾಳ್ ಪ್ರಕಾಶ್‌ ಅವರಿಗೆ ತಾನೊಬ್ಬ ಸಾಹಿತಿ ಎಂಬ ಭ್ರಮೆಯೇ ಇಲ್ಲ. ತೇಜಸ್ವಿ ಮರಣದ ಸಂದರ್ಭದಲ್ಲಿ ಜನರಾಡುವ ಮಾತುಗಳನ್ನು ಕೇಳಿ ಕೇಳಿ, ತಾನೂ ಕೂಡಾ ಹೀಗೇ ಹೇಳಬಲ್ಲೆ ಎನಿಸಿ ಬರೆಯಲು ಕುಳಿತವರು. ಸೋಂಕುಮಾರಿ ಕೋವಿಡ್‌ಗೆ ಒಳಗಾದಾಗ ಒದಗಿಬಂದ ರೂಮ್ ಕ್ವಾರಂಟೈನ್ ಪರಿಸ್ಥಿತಿ ಬರಹಕ್ಕೆ ಇಂಬು ಕೊಟ್ಟಿತು. ಕೆಂಡದ ಜೊತೆಗೂಡಿದ ಇದ್ದಿಲು ಕೂಡಾ ಕೆಂಡವಾಗಿ ಪರಿವರ್ತನೆಗೊಳ್ಳುವಂತೆ ಪ್ರಕಾಶ್ ಅವರು ಆತ್ಮೀಯ ಬಂಧು ತೇಜಸ್ವಿ ಮತ್ತು ಅಣ್ಣ ಶಾಮಣ್ಣನವರ ನೆನಪುಗಳನ್ನು, ಗುಡ್ಡಗಾಡಿನಲ್ಲಿ ಪೊರಕೆ ಕಡ್ಡಿಗಳನ್ನು ಆಯ್ದುಕೊಂಡು ಹೂಮುಳ್ಳುಗಳನ್ನು ಉದುರಿಸಿ ಗಿರಿಜನರು 'ಕಸಪೊರಕೆ' ಕಟ್ಟುವಂತೆ ನಮಗೆ ಸ್ಮೃತಿ ಕಥನಗಳನ್ನು ಕಟ್ಟಿ ಕೊಟ್ಟಿದ್ದಾರೆ: ಈಗಾಗಲೇ ಪ್ರಕಟವಾಗಿರುವ 'ಕಟ್ಟುವ ಹಾದಿಯಲ್ಲಿ' ಎಂಬ ಕೃತಿಯಲ್ಲಿ ಇದರ ಅವತಾರವನ್ನು ಗಮನಿಸಬಹುದು. ಪ್ರಸ್ತುತ ನನ್ನ ಕೈಯಲ್ಲಿರುವ 'ನಾನು ಕಂಡಂತೆ ತೇಜಸ್ವಿ – ಶಾಮಣ್ಣ' ಎಂಬ ಕೃತಿ ಎರಡನೇ ಫಲವಾಗಿದೆ ಎನ್ನುತ್ತಾರೆ ವಿ. ಚಂದ್ರಶೇಖರ ನಂಗಲಿ. 

About the Author

ಕಡಿದಾಳ್‌ ಪ್ರಕಾಶ್
(25 May 1953)

ಕಡಿದಾಳ್‌ ಪ್ರಕಾಶ್‌ ಅವರು ತೀರ್ಥಹಳ್ಳಿ ತಾಲೂಕಿನ ಕಡದಾಳಿನವರು. 25.05.1953ರಂದು ಜನಿಸಿದ ಇವರ ತಾಯಿ ನಾಗವೇಣಮ್ಮ ಹಾಗೂ ತಂದೆ ಕೆ. ಎಸ್.‌ ರಾಮಪ್ಪಗೌಡರ. ಹುಟ್ಟೂರು ಕಡಿದಾಳಿನಲ್ಲಿ ಪಾಥಮಿಕ, ಮೈಸೂರಿನಲ್ಲಿ ಮಾಧ್ಯಮಿಕ ಮತ್ತು ತೀರ್ಥಹಳ್ಳಿಯಲ್ಲಿ ಪ್ರೌಢ ಶಿಕ್ಷಣದ ಪಡೆದ ಬಳಿಕ ಶಿವಮೊಗ್ಗದ ಡಿವಿಎಸ್‌ ಈಜಿನಲ್ಲಿ ಪದವಿಯನ್ನೂ ಪಡೆದಿರುತ್ತಾರೆ. ವಿದ್ಯಾರ್ಥಿ ದಿಸೆಯಲ್ಲಿ ವಿ.ವಿ.ಯ ಬಾಲ್‌ ಬ್ಯಾಡ್ಮಿಂಟನ್ ತಂಡದ ನಾಯಕನಾಗಿ, ನಂತರ ಸಾಕಷ್ಟು ಕ್ರೀಡಾಕೂಟ ನಡೆಸಿದ ಅನುಭವವೂ ಇವರಲ್ಲಿದೆ. ಕುವೆಂಪು ಅವರೊಂದಿಗೆ ನಿಕಟ ಒಡನಾಟವಿದ್ದ ಹಾಗೂ ಕಡಿದಾಳ್‌ ಪರಿವಾರದಿಂದ ಬಂದ ಇವರಿಗೆ ಚಿಕ್ಕಂದಿನಿಂದಲೇ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ. ಪುಸ್ತಕ ಪ್ರಕಟಣೆಯಲ್ಲಿ ಯಾವಾಗಲೂ ...

READ MORE

Related Books