‘ಥರಾವರಿ’ ಜಯಶ್ರೀ ಹೆಗಡೆ ಅವರ ರಚನೆಯ ಲಲಿತ ಪ್ರಬಂಧಗಳಾಗಿವೆ. ಸಾಮಾನ್ಯ ಜನರ ಬದುಕಿನ ಭಾಗವಾಗಿ ಯೋಚಿಸುತ್ತ ಸೂಕ್ಷ್ಮ ಸಾಮಾಜಿಕ ವಿಷಯಗಳನ್ನು ಚರ್ಚೆಗೆ ತರುವಂತಹ ಬರಹಗಳಿವು. ಒಂದು ಕಾದಂಬರಿ ಸೃಷ್ಟಿಸುವ ಚೈತನ್ಯವನ್ನು ನೀಡುವ ಈ ಕೃತಿಯು ಉನ್ನತ ನಿರೂಪಣಾ ಶೈಲಿಯನ್ನು ಹೊಂದಿದೆ. ಪಳಗಿದ ಭಾಷೆ, ಚಿತ್ರಕ ಶಕ್ತಿ. ಹಾಗೂ ವಿಸ್ತಾರವಾದ ಜೀವನನೋಟಗಳು ಈ ಕೃತಿಯನ್ನು ಅನನ್ಯಗೊಳಿಸಿವೆ. ಇವರಿಗೆ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ 2020ನೇ ಸಾಲಿನ ಲಲಿತ ಪ್ರಬಂಧ ಪ್ರಕಾರದಲ್ಲಿ ಇನ್ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಕೃತಿಯಾಗಿದೆ.
©2024 Book Brahma Private Limited.