ವಿಜಯಶ್ರೀ ಸಬರದ ಅವರ ಪ್ರಬಂಧ ಸಂಕಲನ ‘ಸಾಹಿತ್ಯ ಮತ್ತು ಮಹಿಳೆ’. ಇಲ್ಲಿರುವ ಏಳು ಪ್ರಬಂಧಗಳಲ್ಲಿ ಪ್ರಸ್ತಾಪಿತವಾಗಿರುವ ವಿಷಯಗಳ ವ್ಯಾಪ್ತಿ ಹಿರಿದು, ಎಷ್ಟು ಚಿಂತನೆ ನಡೆದರೂ ಸಾಲದೆನ್ನುವಷ್ಟು ಬೇಡಿಕೆ ಇರುವಂತಹವು. ಸಾಹಿತ್ಯ - ಧರ್ಮ- ಅಸ್ಪೃಷ್ಯತೆ- ಮಹಿಳೆ ಎಂಬ ಮೊದಲ ಪ್ರಬಂಧವೇ ಇದಕ್ಕೆ ಉದಾಹರಣೆ ಎಂದಿದ್ದಾರೆ ಸಿ. ವೀರಣ್ಣ. ಈ ಕೃತಿಗೆ ಬೆನ್ನುಡಿ ಬರೆದಿರುವ ಅವರು ವಿಶಾಲ ಹರವುಳ್ಳ ವಸ್ತು ಇದು, ವಿಜಯಶ್ರೀ ಅವರ ಸಂಗ್ರಹರೂಪದಲ್ಲಿ ಈ ವಿಷಯವನ್ನು ವಿವೇಚಿಸಿರುವುದರಿಂದ ಅದರ ಎಷ್ಟೋ ಮಗ್ಗುಲುಗಳ ವಿವರಗಳು ಇಲ್ಲಿ ಕಾಣಿಸದೆ ಇರಬಹುದು. ಆದರೆ ಚಿಂತನೆಯ ಎಳೆಯನ್ನು ಗ್ರಹಿಸಲು ಅದು ಅಡ್ಡಿಯಾಗುವುದಿಲ್ಲ. ಹರಿಶ್ಚಂದ್ರ ಕಾವ್ಯದ ಹೊಲತಿಯರ ಪ್ರಸಂಗಕ್ಕೆ ಹೊಸ ನೋಟವೊಂದನ್ನು ಕೊಡುವ ಪ್ರಯತ್ನ ಇಲ್ಲಿನ ಲೇಖನವೊಂದರಲ್ಲಿದೆ. ಅದರ ಬಗ್ಗೆ ಮೆಚ್ಚುಗೆ ಮೂಡಿದರೂ ವಿಶ್ವಾಮಿತ್ರನನ್ನು ವೈದಿಕ ಬುದ್ಧಿಯ ಪ್ರತಿನಿಧಿ ಎಂದು ಅವರು ಹೆಸರಿಸುವುದಾಗಲೀ ಹೊಲತಿಯರ ಹುಟ್ಟಿನ ಬಗ್ಗೆ ಅವರ ಊಹಾತ್ಮಕ ತರ್ಕವಾಗಲೀ ಮತ್ತಷ್ಟು ಶೋಧನೆ, ಚಿಂತನೆಗಳನ್ನು ಅಪೇಕ್ಷಿಸುತ್ತವೆ. ವಿಜಯಶ್ರೀ ಅವರಿಗೆ ಕೃತಿಗಳನ್ನು ಯಾವ ರೀತಿ ಅರ್ಥೈಸಬೇಕೆಂಬ ನೆಲೆ ಸಿಕ್ಕಿದೆ ಎಂದಿದ್ದಾರೆ. ಜೊತೆಗೆ ಆ ದಾರಿಯಲ್ಲಿ ಅವರು ಸಮರ್ಥವಾಗಿ ಮುನ್ನಡೆಯಬಲ್ಲರು. ಸಾಂಪ್ರದಾಯಿಕ ವಿಮರ್ಶೆಯ ಪರಿಭಾಷೆಗೆ ವಿದಾಯ ಹೇಳಿ ಸಮುದಾಯ- ಸಾಹಿತ್ಯಗಳನ್ನು ಬೆಸೆಯುವ ಹೊಸ ವಿಮರ್ಶೆಯ ದಿಗಂತದತ್ತ ಅವರು ಹೆಜ್ಜೆ ಇಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...
READ MORE