‘ಆಯ್ದ ಲಲಿತ ಪ್ರಬಂಧಗಳು’ ವೀರೇಂದ್ರ ಸಿಂಪಿ ಅವರ ಲಲಿತ ಪ್ರಬಂಧಗಳ ಸಂಕಲನವಾಗಿದೆ. ಈ ಕೃತಿಯಲ್ಲಿ ಒಟ್ಟು 38 ಲೇಖನಗಳ ಸಂಕಲನಗಳಿವೆ. ಲೇಖಕರ ಅನುಭವಗಳ ಸನ್ನಿವೇಶಗಳ ವರ್ಣನೆಯನ್ನು ಮಾಡಿದ್ದಾರೆ.
ಲೇಖಕ, ಪ್ರಬಂಧಕಾರ ವೀರೇಂದ್ರ ಸಿಂಪಿ ಅವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣದಲ್ಲಿ. ತಂದೆ ಜಾನಪದ ತಜ್ಞ ಸಿಂಪಿ ಲಿಂಗಣ್ಣ, ತಾಯಿ ಸೊಲಬವ್ವ. ಪ್ರಾರಂಭಿಕ ಶಿಕ್ಷಣ ಚಡಚಣದಲ್ಲಿ ಪೂರೈಸಿದ ಅವರು ಬಿಜಾಪುರದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ, ಕರ್ನಾಟಕ ವಿ.ವಿ.ಯಿಂದ ಎಂ.ಎ. ಪದವಿ ಪಡೆದರು. ಆನಂತರ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು 1999ರಲ್ಲಿ ನಿವೃತ್ತಿಯಾದರು. ತದನಂತರವೂ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದರು. ಶಾಲಾ ದಿನಗಳಿಂದಲೇ ಸಾಹಿತ್ಯದತ್ತ ಆಕರ್ಷಿತರಾಗಿದ್ದ ವೀರೇಂದ್ರ ಸಿಂಪಿ ಅವರು ಹೈಸ್ಕೂಲಿನಲ್ಲಿದ್ದಾಗಲೇ ‘ಖೊಟ್ಟಿ ...
READ MOREಹೊಸತು- 2002- ಸೆಪ್ಟೆಂಬರ್
ಪ್ರಬಂಧಗಳ ರಚನಾ ಕೌಶಲ್ಯ ಎಲ್ಲರಿಗೂ ನಿಲುಕದು. ಸರಳವಾಗಿ ಅಭಿವ್ಯಕ್ತಿಸಲು ತಿಳಿದ ವ್ಯಕ್ತಿಗಳಿಗೆ ಅದು ಒಂದು ಹೂವಿನ ಸರವೆತ್ತಿದಂತೆ ! ಅದರಲ್ಲೂ ಬಗೆ ಬಗೆಯ ಹೂಗಳ ಮಾಲೆ. ಹಾಗಾಗಿ ವಸ್ತುವಿನ ಆಯ್ಕೆಯಲ್ಲಿ ವೈವಿಧ್ಯತೆಯಿದ್ದು ತುಂಬಾ ಜಾಗರೂಕತೆಯಿದೆ. ಆಪ್ತವಾಗಿ ಮಾತನಾಡುವ ವೀರೇಂದ್ರ ಸಿಂಪಿ ಅವರ ೩೮ ಚಿಕ್ಕ-ಚೊಕ್ಕ ಲಲಿತ ಪ್ರಬಂಧಗಳ ಈ ಸಂಕಲನ ನಮಗೆ ತುಂಬ ಮೆಚ್ಚುಗೆಯಾಗುವುದರಲ್ಲಿ ಸಂಶಯವಿಲ್ಲ. ಅಲ್ಲಲ್ಲಿ ತಿಳಿ ಹಾಸ್ಯದ ಲೇಪವಿದೆ. ಅನುಭವಗಳ-ಸನ್ನಿವೇಶಗಳ ವರ್ಣನೆಯಿದೆ.