ಹಿರಿಯ ಸಾಹಿತಿ ಪು.ತಿ. ನರಸಿಂಹಚಾರ್ ಅವರು ಬರೆದ ಪ್ರಬಂಧಗಳ ಸಂಕಲನ-ರಥಸಪ್ತಮಿ ಹಾಗೂ ಇತರ ಚಿತ್ರಗಳು. ಗೋಕುಲಾಷ್ಟಮಿ, ಕೊಳದ ತಡಿಯಲ್ಲಿ, ನೌಕಾಚಂದ್ರ, ರಥಸಪ್ತಮಿ, ನಾರಾಯಣನ ಗುಡಿಯಲ್ಲಿ, ವೈಲ್ ಮಾಳಿಗೆ ಉತ್ಸವ, ಮಳೆ ಹಾಗೂ ಬೀದಿಯ ಬಸವ ಹೀಗೆ 8 ಪ್ರಬಂಧಗಳನ್ನು ಸಂಕಲನ ಒಳಗೊಂಡಿದೆ. ಇಲ್ಲಿಯ ಬಹುತೇಕ ಪ್ರಬಂಧಗಳು ಪ್ರಬುದ್ಧ ಕರ್ಣಾಟಕ, ಜಯಕರ್ನಾಟಕ ಹಾಗೂ ಜೀವನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಈ ಪ್ರಬಂಧಗಳು ವಸ್ತು ವೈವಿಧ್ಯತೆಯಿಂದ ಕಂಗೊಳಿಸುತ್ತವೆ.
ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ. ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ ...
READ MORE