ಕಮಲಾ ಹಂಪನಾ ಅವರ ಸಮಗ್ರ ಸಾಹಿತ್ಯದ 9ನೇ ಸಂಪುಟ ’ಬಲಾಕ’. ಚೆನ್ನವೀರ ಕಣವಿ ಅವರು ಸೂಚಿಸಿದ ಹೆಸರನ್ನೇ ಪುಸ್ತಕಕ್ಕೆ ಇಡಲಾಗಿದೆ. ಆರು ವೈವಿಧ್ಯಮಯ ಕ್ಷೇತ್ರಗಳಿಗೆ ಸಂಬಂಧಿಸಿದ ಲೇಖನಗಳು ಕೃತಿಯಲ್ಲಿದೆ. ಸಂಶೋಧನಾ ಪ್ರಬಂಧಗಳು, ಪುಸ್ತಕಕ್ಕೆ ಬರೆದಿರುವ ಮುನ್ನುಡಿಗಳು, ವಿವಿಧ ಸಂದರ್ಭದಲ್ಲಿ ಬರೆದ ವ್ಯಕ್ತಿಚಿತ್ರಗಳು ಅಲ್ಲದೆ ಕನ್ನಡ, ಕನ್ನಡತನ ಹಾಗೂ ಕನ್ನಡದ ಇತಿಹಾಸಕ್ಕೆ ಸಂಬಂಧಿಸಿದ ಬರಹಗಳನ್ನೂ ಕಾಣಬಹುದು,.
ಹಿರಿಯ ಲೇಖಕಿಯೊಬ್ಬರ ಕಾಳಜಿಗಳ ವೈವಿಧ್ಯ
ಖ್ಯಾತ ಕನ್ನಡ ವಿದ್ವಾಂಸರೂ, ಲೇಖಕಿಯೂ ಆದ ಡಾ. ಕಮಲಾ ಹಪನಾ ಅವರ ಸಮಗ್ರ ಸಾಹಿತ್ಯ ಸಂಪುಟಗಳಲ್ಲಿ ಒಂಬತ್ತನೆಯದಾದ ಈ ಸಂಪುಟ ವಿವಿಧ ಸಂದರ್ಭಗಳಲ್ಲಿ ಅವರು ಬರೆದ ಬೇರೆ ಬೇರೆ ನೆಲಗಳುಳ್ಳ ಪ್ರಬಂಧಗಳ ಸಂಗ್ರಹವಾಗಿದೆ. ಮ್ಮ ಎಲ್ಲಾ ಈ ಸಂಪುಟಗಳಿಗೂ 'ಬ'ಕಾರದಿಂದ ಪ್ರಾರಂಭವಾಗುವ ಹೆಸರನ್ನಿಡುವುದು ಕಮಲಾ ಅವರ ಅಭ್ಯಾಸ. ಬಲಾಕ ಹೆಸರೇ ಸೂಚಿಸುವಂತೆ ಕೊಕ್ಕರೆಯ ಪಕ್ಷಿನೋಟ ಈ ಹೊತ್ತಿಗೆಯಲ್ಲಿದೆ. ಪ್ರತಿ ಅಧ್ಯಾಯಕ್ಕೆ ಗರಿ ಎಂದು ಹೆಸರಿಟ್ಟಿದ್ದು ಆರು ಗರಿಗಳನ್ನು ಈ ಸಂಪುಟ - ಒಳಗೊಂಡಿದೆ.
ಮೊದಲ ಗರಿಯಲ್ಲಿ ಸಂಶೋಧನೆ ಎಂದರೆ ಏನು? ಎಂದು ತಿಳಿಸುತ್ತಾರೆ. - ಹಿಂದೆ ಸಂಶೋಧನೆ ಎಂಬ ಹೆಸರಿಲ್ಲದೆಯೇ ನಡೆದ ಅನೇಕ ಸಂಶೋಧನೆಗಳನ್ನು ಹೆಸರಿಸುತ್ತಾರೆ. ಕವಿ ಕಾಲ-ಕಾವ್ಯಗಳ ಸಂಗ್ರಹ, ಶಾಸನಗಳ ಓದು ಈ ಕುರಿತ ಇಲ್ಲಿನ ಬರಹಗಳು ಇಂದಿನ ಸಂಶೋಧನಾ ವಿದ್ಯಾರ್ಥಿಗೆ ಉತ್ತಮ ಮಾರ್ಗದರ್ಶಿಯಾಗಿದೆ ಅವರ ಅಪಾರ ಓದು ಚಿಕಿತ್ಸಕ ನೋಟ ಈ ಭಾಗಗಳಲ್ಲಿ ಈ ಅವರು ಹೆಸರಿಸುವ ಗ್ರಂಥಗಳಿಂದ ವ್ಯಕ್ತವಾಗುತ್ತದೆ. ಗರಿ ಎರಡರಲ್ಲಿ ಕಮಲಾರವರ ಸೃಜನಶೀಲ ಬರಹಗಳ ವ್ಯಾಪ್ತಿಯನ್ನು ಕಾಣಬಹುದು. 'ಅಹಿಂಸೆಯ ಹಾದಿಯಲ್ಲಿ ಈ ಭರತ ಬಾಹುಬಲಿಯರ ಬಾಲ್ಯದ ಚಿತ್ರಣ ಹೊಂದಿದೆ. 'ದಂಡಂ ದಶಗುಣಂ ಭವೇತ್' ಎಂಬ ಲೇಖನದಲ್ಲಿ ವಿಶ್ವಾಮಿತ್ರಾಹಿ ಎಂಬ ಶ್ಲೋಕವನ್ನು ಹೆಸರಿಸಿ ದಂಡದಿಂದ ಆಗುವ ಹಲವು ಪ್ರಯೋಜನಗಳನ್ನು ತಿಳಿಸುತ್ತಾರೆ. ಕಮಲಾ ಅವರು ಚಿತ್ರಿಸುವ 'ನಾ ಜಿ ಕಂಡ ಬೆಂಗಳೂರು' ವಾಹನಗಳಿಲ್ಲದ ವಿಶಾಲವಾದ ಹೂತುಂಬಿದ ಸಾಲುಮರಗಳ ಚಿತ್ರಣವನ್ನು ಅವರೇ ಅನುಭವಿಸಿ ದರ್ಶಿಸಿರುವುದನ್ನು ಈಗಿನವರು ಊಹಿಸಲೂ ಹೆ ಸಾಧ್ಯವಿಲ್ಲ. ಹಾಗೂ ಕುಟುಂಬ ಎಂಬ ಕಲ್ಪನೆ ನಮ್ಮ ಹಳಗನ್ನಡ ಕಾವ್ಯಗಳಲ್ಲಿ ಬಂದಿರುವ) ಅದಕ್ಕಿರುವ ಪ್ರಾಮುಖ್ಯತೆ ವಡ್ಡಾರಾಧನೆಯಿಂದ ಪಂಪನವರೆಗೆ ಹೆಕ್ಕಿ ತೆಗೆದಿದ್ದಾರೆ.
'ಗರಿ' ಮೂರರಲ್ಲಿ ಡಾ. ಶ್ರೀ ಶಿವಮೂರ್ತಿ ಮುರುಘರಾಜ ಶರಣರ ಈ ವ್ಯಕ್ತಿತ್ವ ಅವರ ಮಹಿಳಾಪರ ಚಿಂತನೆಗಳ ಕುರಿತು ಬರೆಯುತ್ತಾರೆ. “ಮಂಗಳಮುಖಿಯರನ್ನು ವಿಶೇಷ ಚೇತನಗಳ ವ್ಯಕ್ತಿಗಳನ್ನು ನೋಡುವ ಹಾಗೆಯೇ ಸಮಾಜ ನೋಡಬೇಕು ಎನ್ನುತ್ತಾರೆ. ಈ ಬರಹಗಳಲ್ಲಿ ಅವರ ವೈಚಾರಿಕ ಪ್ರಖರತೆ ಹಾಗೂ ದಿಟ್ಟ ನಿಲುವು ಗೋಚರವಾಗುತ್ತದೆ. ಏಕರೂಪದ -ಕನ್ನಡ ಮಾಧ್ಯಮದ -ಶಿಕ್ಷಣಕ್ಕಾಗಿ ಆಗ್ರಹಿಸುವ ಲೇಖನಗಳು ಇಲ್ಲಿವೆ. ಹಾಗೂ ದೊಡ್ಡರಂಗೇಗೌಡ, ನರಹಳ್ಳಿ ಬಾಲಸುಬ್ರಹ್ಮಣ್ಯ ಡಾ. ಯಶೋಧಾ ಭಟ್, ಬಿ. ಗಿರಿಜಾ ಹಾಗೂ ಅವರು ತುಂಬಾ ಗೌರವಿಸುವ ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ಕುರಿತು ವ್ಯಕ್ತಿಚಿತ್ರಗಳಿವೆ. ಎಲ್ಲರನ್ನೂ ಗೌರವಿಸುವ ಪ್ರೀತಿಸುವ ಸಕಲರಲ್ಲಿ ಒಳಿತನ್ನೇ ಕಾಣುವ ಸದ್ಗುಣ ಅವರ ಈ ಬರಹಗಳ ಮೂಲಕ ವ್ಯಕ್ತವಾಗಿದೆ. ಹಾಗಾಗಿ ಇಲ್ಲಿ ವಿಮರ್ಶಾತ್ಮಕ ದೃಷ್ಟಿಯ ಅಗತ್ಯ ಅವರಿಗೆ ಕಂಡಿಲ್ಲ. ಉಳಿದ ಗರಿಗಳಲ್ಲಿ ಕಮಲರವರು ವಿವಿಧ ವೇದಿಕೆಗಳಲ್ಲಿ ಮಾಡಿದ ಭಾಷಣಗಳು, ಬರೆದ ಮುನ್ನುಡಿಗಳು ಸೇರಿವೆ. ಓದು, ಅಧ್ಯಾಪನ ಸಾಹಿತಿಗಳ ಒಡನಾಟ, ಮಕ್ಕಳ ವಿದ್ಯಾರ್ಥಿಗಳನ್ನು ಕುರಿತ ಅವರ ಕಾಳಜಿ, ಉಪನ್ಯಾಸಗಳು ಪರರಿಗೆ ಮಾಡಿದ ಕೈಲಾದ ಸಹಾಯ, ಹಂಪನಾರವರೊಡನೆಯ ಅನುರೂಪದ ದಾಂಪತ್ಯದ ಇಣುಕುನೋಟ-ಇವುಗಳನ್ನು ಒಟ್ಟಾರೆಯಾಗಿ ಕಾಣಬಹುದು. ಈ ಎಲ್ಲಾ ಮಾಹಿತಿ ಹೊಂದಿರುವ ಹಿಂದಿನ ಕಾಲಘಟ್ಟದ ಕುರುಹುಗಳು ಸಿಗುವ, ಇವರು ಅಧ್ಯಯನ ಮಾಡಿರುವ ಕನ್ನಡ ಸಾಹಿತ್ಯದ ಅಮೂಲ್ಯ ಪುಸ್ತಕಗಳ ಪಟ್ಟಿ ಅವುಗಳು ಪ್ರಕಟವಾದ ಕಾಲ ಇತ್ಯಾದಿಗಳಿಂದ ಕೂಡಿದ ಈ ಗ್ರಂಥವು ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಬಹುಮುಖ ಭಾಗವಹಿಸುವಿಕೆ ಕುರಿತ ಅಧ್ಯಯನದಲ್ಲಿ ಆಸಕ್ತಿ ಇರುವವರಿಗೆ ಅಭ್ಯಾಸ ಯೋಗ್ಯವಾಗಿದೆ.
-ಮಂಜುಳಾ ಕೆ. ರಾಜು
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಮಾರ್ಚ್ 2019)
©2024 Book Brahma Private Limited.