ಅವಿಭಜಿತ ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಅಲ್ಲಿಯ ಭಾಷೆ ವೈವಿಧ್ಯತೆಯನ್ನು ಸಮೀಕ್ಷೆ ಮಾಡಿ ಬರೆದ ಕೃತಿ -ಗ್ರಾಮ ನಾಮ ಸಂಸ್ಕೃತಿ. ಪ್ರತಿ ಊರು ತನ್ನದೇ ಆದ ಐತಿಹಾಸಿಕ ಸಂಗತಿಗಳಿಂದ ಪ್ರಾಮುಖ್ಯತೆ ಪಡೆದಿದ್ದು, ಭಾಷೆಯೂ ಸಹ ತನ್ನ ವೈವಿಧ್ಯತೆಯನ್ನು ಕಾಯ್ದುಕೊಂಡೇ ಬಂದಿರುತ್ತದೆ. ಶತಮಾನ ಕಂಡ ಪ್ರಾಥಮಿಕ ಶಾಲೆಗಳ ಅಧ್ಯಯನಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದನ್ವಯ ಲೇಖಕರು ಕೈಗೊಂಡ ಸಮೀಕ್ಷ ಮಧ್ಯೆ ಗ್ರಾಮ ನಾಮ ಸಂಸ್ಕೃತಿಯ ಮಾಹಿತಿಯೂ ಸಂಗ್ರಹಿಸುತ್ತಾ ಬಂದಿದ್ದೇ ಈ ಕೃತಿ ರೂಪುಗೊಂಡಿದೆ. ಲೇಖಕರು ಆಯ್ದುಕೊಂಡ ಗ್ರಾಮಗಳ ಇತಿಹಾಸವನ್ನು ಸಹ ತಿಳಿಯಲು ಈ ಕೃತಿ ಆಕರ ಗ್ರಂಥವಾಗಿದೆ.
©2024 Book Brahma Private Limited.