‘ಕನ್ನಡ ಜಾನಪದ ಶಾಸ್ತ್ರ’ ಪ್ರೊ.ಎಚ್.ಟಿ. ಪೋತೆ ಅವರ ಕೃತಿ. ಜನಪದ ಸಂಸ್ಕೃತಿ ಅಧ್ಯಯನದ ಬುಡಕಟ್ಟು ಅಧ್ಯಯನ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಈ ನೆಲೆಯಲ್ಲಿ ಅಲೆಮಾರಿಗಳು ಅರೆ ಅಲೆಮಾರಿಗಳಲ್ಲದೆ ಕಾಡು ಮೇಡುಗಳಲ್ಲಿ ವಾಸ ಮಾಡುವ ಸಣ್ಣಪುಟ್ಟ ಜನಸಮುದಾಯಗಳ ಕುರಿತು ತಲಸ್ಪರ್ಶಿಯಾದ ಅಧ್ಯಯನ ನಡೆಯುತ್ತಿದೆ. ಉದಾಹರಣೆಗೆ ತೋದವರು, ಕೊಡವರು, ಲಂಬಾಣಿಗಳು, ಹಾಲಕ್ಕಿ ಒಕ್ಕಲಿಗರು, ಕೊಂಚಿಕೊರಮರು, ಸುಡಗಾಜು ಸಿದ್ಧರು, ಮೊಗೇರರು, ಕಿಳ್ಳೆಕ್ಯಾತರು ಹೀಗೆ ಸಾವಿರಾರು ಬುಡಕಟ್ಟಿನ ಸಮುದಾಯುದವರು ಸಾಂಸ್ಕೃತಿವಾಗಿ ಒಂದೊಂದು ಭಾರತವೇ ಆಗಿದ್ದಾರೆ. ಅಪ್ಪಟ ದೇಶೀಯವರಾದ ಇವರನ್ನು ಶಿಷ್ಟವರ್ಗದವರು ಅಲಕ್ಷ್ಯ ಮಾಡಿ, ಅವರು ಕುಲದಿಂದ ಕೀಳರು, ಅನಾಗರಿಕರು ಎಂದು ಸಮಾಜದಿಂದ ದೂರಿಡುತ್ತ ಬಂದ ಪದ್ಧತಿಯನ್ನು ನಮ್ಮ ಸಾಮಾಜಿಕ, ಸಾಂಸ್ಕೃತಿಕ ಚರಿತ್ರೆಯಲ್ಲಿ ವಿಫುಲವಾಗಿ ಕಾಣಬಹುದಾಗಿದೆ.
ಆಧುನಿಕ ಯುಗದಲ್ಲೂ ಮಧುರ ಕವಿಯಂತಹವರು ಬೀರನನ್ನು ಗೊರವನನ್ನು ಗೌರವಿಸಲಾರದವರು ಈಗಲೂ ಇದ್ದಾರೆ ಎನ್ನುತ್ತಾರೆ ಲೇಖಕ ಪ್ರೊ.ಎಚ್.ಟಿ.ಪೋತೆ. ಜನಪದ ಕಲಾ ಪ್ರದರ್ಶನದಿಂದ ಆನಂದ, ಸವಿಯುವ ಜನಸಮುದಾಯ ಅದರ ಉಪಯೋಗ ಪಡೆದು ವಾದ್ಯಗಾರರ, ಹಾಡುಗಾರರ, ನೃತ್ಯಗಾರರ ಕಲಾಪ್ರಾವೀಣ್ಯತೆಗೆ ಮೆಚ್ಚಿದ ಮೇಲೂ ಅವರ ಜಾತಿ ಎದುರಾದಾಗ ಸಾಮಾಜಿಕವಾಗಿ ದೂರಿಡುವ ವ್ಯವಸ್ಥೆ ನಮ್ಮದಾಗಿದೆ. ಅದು ದೂರಾಗಿ ಕಲೆ, ಕಲಾವಿದನನ್ನು ಸಮಾನವಾಗಿ ಗೌರವಿಸಿದಾಗ ನಿಜಕ್ಕೂ ನಮ್ಮ ತಳವರ್ಗದ ಸಂಸ್ಕೃತಿ ಸಂಪತ್ತು, ಜಾನಪದ ಜ್ಞಾನ ಹಾಗೂ ಅದರಲ್ಲಿ ವಿಜ್ಞಾನ ಜಗತ್ತು ಜೀವಂತವಾಗಿ ಬಹಳಕಾಲ ಉಳಿಯಬಹುದೆಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ. ಈ ಕೃತಿಯು ಕನ್ನಡ ಜಾನಪದ ಶಾಸ್ತ್ರವನ್ನು ಅಧ್ಯಯನಮಾಡುವವರಿಗೆ ಮಾರ್ಗದರ್ಶಿಯಾಗಲಿದೆ
©2024 Book Brahma Private Limited.