ಪ್ರಬಂಧಗಳು

Author : ಬಿ.ಎಚ್. ನಿರಗುಡಿ

Pages 64

₹ 16.00




Year of Publication: 2016
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸೂಪರ್ ಬಜಾರ್, ಮುಖ್ಯರಸ್ತೆ, ಕಲಬುರಗಿ-585101

Synopsys

ಲೇಖಕ ಬಿ.ಎಚ್. ನಿರಗುಡಿ ಅವರ ಬರೆದ ಪ್ರಬಂಧಗಳ ಸಂಕಲನ-ಪ್ರಬಂಧಗಳು. ಈ ಕೃತಿಯು 2006ರಲ್ಲಿ ಮೊದಲ ಮುದ್ರಣ, 2008ರಲ್ಲಿ ಎರಡನೆಯ ಮುದ್ರಣ ಕಂಡಿದೆ. ವಸ್ತು ವೈವಿಧ್ಯತೆಯ ಒಟ್ಟು 30 ಪ್ರಬಂಧಗಳಿದ್ದು, ಸರಳ ಭಾಷೆ, ಆಕರ್ಷಕ ನಿರೂಪಣಾ ಶೈಲಿ, ಓದಿಸಿಕೊಂಡು ಹೋಗುವ ಗುಣ ಇತ್ಯಾದಿ ಸಾಹಿತ್ಯಕ ಅಂಶಗಳಿರುವ ಈ ಪ್ರಬಂಧಗಳು ‘ಮಾದರಿ’ ಎನ್ನುವಂತಿವೆ. ವರದಕ್ಷಿಣೆ, ಪರಿಸರ ಮಾಲಿನ್ಯ, ಮಧ್ಯಪಾನ, ರಾಷ್ಟ್ರೀಯ ಭಾವೈಕ್ಯತೆ, ಆರೋಗ್ಯ ಭಾಗ್ಯ ಇತ್ಯಾದಿ ವಿಷಯ ಕೇಂದ್ರಿತ ಪ್ರಬಂಧಗಳಿವೆ. ಪ್ರಬಂಧ ಬರಹದ ದೃಷ್ಟಿಯಿಂದ ಈ ಬರಹಗಳು ಮಾರ್ಗದರ್ಶಿಯಾಗಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಉಪಯುಕ್ತವಾಗಿದೆ.

About the Author

ಬಿ.ಎಚ್. ನಿರಗುಡಿ

ಲೇಖಕ ಬಿ.ಎಚ್. ನಿರಗುಡಿ ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕವಲಗಾ ಗ್ರಾಮದವರು. ಗುಲಬರ್ಗಾ ವಿವಿಯಿಂದ ಎಂ.ಎ, ಎಂ.ಇಡಿ ಪದವೀಧರರು. ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ನಗರದ ಖಾಸಗಿ ಪ.ಪೂ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ಸಾಹಿತ್ಯ ಸಾರಥಿ’ ಮಾಸ ಪತ್ರಿಕೆಯ ಸಂಪಾದಕರು. ವಿವಿಧ ಕ್ಷೇತ್ರದ ಸಾಧಕರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಗೌರವಿಸುತ್ತಿದ್ದಾರೆ. ಕಲಬುರಗಿ ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ. ಕೃತಿಗಳು: ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಕನ್ನಡ ಭಾಷೆ ಹಾಗೂ ...

READ MORE

Related Books