ಹತ್ತು ಹೆಜ್ಜೆ

Author : ಎ.ಟಿ.ಎಸ್. ಸನ್ಮತಿ ನಾಯಕ್

Pages 80

₹ 65.00




Year of Publication: 2012
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ.
Phone: 9141833556

Synopsys

'ಹತ್ತು ಹೆಜ್ಜೆ' ಎ.ಟಿ.ಎಸ್ ಸನ್ಮತಿ ನಾಯಕ್  ಚಿತ್ರಿಸಿದ ಪುಟ್ಟ ಪ್ರಬಂಧ ಸಂಕಲನ. ಓದು, ಪ್ರತಿಭೆ, ವಿನಯವಂತಿಕೆಯಿಂದ “ಸನ್ಮತಿ' ಪರಿಚಿತ ಹೆಸರು. ವಿದ್ಯಾರ್ಥಿ ದೆಸೆಯಲ್ಲಿ ವಿವಿಧ ಸಂದರ್ಭಗಳಲ್ಲಿ ಬರೆದ ಪ್ರಬಂಧಗಳನ್ನು ಸಂಕಲಿಸಿ ಈ ಪುಸ್ತಕ ರೂಪ ತಾಳುತ್ತಿದೆ. ಆದರೆ ಇದೊಂದು ಸಂಪೂರ್ಣ ಪ್ರಬಂಧ ಸಂಕಲನವೆನ್ನಲಾಗದು. ಪ್ರಾರಂಭದ ಮೂರು ಪ್ರಬಂಧಗಳು ಇವರ ವಿದ್ಯಾರ್ಥಿ ಜೀವನ ಹಾಗೂ ತನ್ನ ಚಿಕ್ಕಪ್ಪನ ಆದರ್ಶ, ಅಭಿಮಾನ ಕುರಿತು ಬರೆದ ಬರಹಗಳು ಆತ್ಮ ಚರಿತ್ರೆಯ ಭಾಗಗಳಾಗಿವೆಯೇ ಹೊರತು ಪ್ರಬಂಧ ಚೌಕಟ್ಟಿಗೆ ಒಳಪಡದವು.  ವಿವಿಧ ಸಂದರ್ಭಗಳಲ್ಲಿ ಬರೆದ ಪ್ರಬಂಧಗಳಾದ್ದರಿಂದ ವಿಷಯಗಳಲ್ಲಿ ವೈವಿಧ್ಯತೆಯನ್ನು ಕಾಣಬಹುದು.

ಕನ್ನಡ ಭಾಷೆಯ ಉಳಿವು, ಕನ್ನಡ ನಾಡಿನ ಕಲೆಗಳು, ಜನಪದ ಲೋಕ ಪ್ರಬಂಧಗಳು ಭಾಷೆ-ಕಲೆ-ಸಾಹಿತ್ಯ-ಸಂಗೀತ ಕುರಿತ ವಿವರಗಳಿಂದ ಕೂಡಿದ್ದು, ವಿದ್ಯಾರ್ಥಿ ನೆಲೆಯಲ್ಲಿ ಉತ್ತಮವಾಗಿದ್ದರೂ ಇನ್ನೂ ಆಳ ಅಧ್ಯಯನ, ವಿವಿಧ ಮುಖ ಚಿಂತನೆಯ ಅಗತ್ಯವಿದೆ. ಕ್ರೀಡೆಯ ಮಹತ್ವ ಸಾರುವ ಪ್ರಬಂಧ ಸುದೀರ್ಘವಾಗಿದ್ದು, ಕ್ರೀಡೆಯ ವಿವಿಧ ಪಾತ್ರ ವಿವರಿಸಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಟಿ.ವಿ, ಮೊಬೈಲ್, ವಿಡಿಯೋ ಗೇಮ್‌ಗಳ ಹಾವಳಿಯಿಂದ ಹೇಗೆ ಹಾಳಾಗುತ್ತಿದ್ದಾರೆ, ತಮ್ಮ ದೈಹಿಕ ಕ್ಷಮತೆ ಕಳೆದುಕೊಳ್ಳುವುದರ ಜೊತೆಗೆ ಮುಂದಿನ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುವುದಿಲ್ಲ ಎಂಬ ಕಾಳಜಿ ಹೊಂದಿರುವ ಪ್ರಬಂಧವಾಗಿ ಈ ಪುಸ್ತಕ ಹೆಚ್ಚು ಪ್ರಸ್ತುತ, ಆಪ್ತ ಎನಿಸುತ್ತದೆ.

Related Books