’ಒಂದು ದಿನ ಒಬ್ಬರು ಮಹಾ ಹರಟೆಮಲ್ಲ ಆಟೋ ಡ್ರೈವರ್ ಸಿಕ್ಕಿದರು. ಹತ್ತಿದಾಗಿನಿಂದ ಒಂದೇ ಸಮನೆ ಆಟೋ ಡ್ರೈವರ್‌ಗಳ ದುರ್ವಸ್ಯನಗಳು, ಹಣ ಕಳೆದುಕೊಂಡು ಮನೆಗೆ ಹೋಗಲು ಮುಖವಿಲ್ಲದೇ ಯಾವುದೋ ಫ್ಲೈ ಓವರ್ ಅಡಿಯಲ್ಲಿ ಮಲಗುವುದು ... ಈ ಥರ ಏನೇನೋ ಹೇಳ್ತಿದ್ದರು. ಓಹೋ, ಹಾಗಾ, ಅಯ್ಯೋ ಅಂತ ರಿಯಾಕ್ಟ್ ಮಾಡುತ್ತಾ ಕುಳಿತಿದ್ದೆ. ಅದರಿಂದ ಉತ್ತೇಜಿತರಾಗಿ ಮೊದಲು ಬರಿ ‘ನ್ಯೂಸ್ ಹೆಡ್‌ಲೈನ್ಸ್’ ಮುಗಿಸಿದ್ದವರು, ಈಗ ‘ನ್ಯೂಸ್ ಇನ್ ಡಿಟೇಲ್’ ಶುರು ಮಾಡಿದರು’...
ಹೀಗೆ ಹಲವಾರು ಚಾಲಕರೊಂದಿಗಿನ ಮಾತುಕತೆಗಳನ್ನಿಟ್ಟುಕೊಂಡು ಲಲಿತ ಪ್ರಬಂಧಗಳನ್ನು ಓದುಗರ ಮನತಟ್ಟುವಂತೆ ಬರೆದಿದ್ದಾರೆ ಬಿ.ವಿ. ಭಾರತಿ. ಜಸ್ಟ್ ಮಾತ್ ಮಾತಲ್ಲಿ ಏನೇನೆಲ್ಲಾ ಮಾತಾಡಿದ್ರು ಭಾರತಿ ಅವರು ಅನ್ನೋದನ್ನ ತಿಳಿಯೋದಕ್ಕೆ ನೀವು ಈ ಪುಸ್ತಕವನ್ನು ಓದಲೇಬೇಕು.
ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್ ಕವಿತೆಗಳು', 'ಜಸ್ಟ್ ಮಾತ್ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ...
READ MORE