ಒಬ್ಬ ಪಶುವೈದ್ಯರ ದಿನನಿತ್ಯದ ಅನುಭವಗಳನ್ನು ಹಾಸ್ಯಮಯವಾಗಿ ಹೇಳುವ ಕೃತಿ ʻಡೇರಿ ಡಾಕ್ಟರ್ ಹೋರಿ ಮಾಸ್ಟರ್ʼ. ವೃತ್ತಿಯಲ್ಲಿ ಡೇರಿ ಡಾಕ್ಟರ್ ಆಗಿರುವ ಡಾ. ಗಣೇಶ ಎಂ. ನೀಲೇಸರ ಅವರು ತಾವು ಪಶುಗಳಿಗೆ ಚಿಕಿತ್ಸೆ ನೀಡುವಾಗ ಡೇರಿ ಫಾರಂಗಳಲ್ಲಿ ನಡೆಯುವ ಪ್ರಸಂಗಗಳನ್ನು ಹಾಸ್ಯದೊಂದಿಗೆ ಬರೆದಿದ್ದಾರೆ. ಚಡ್ಡಿ ತಿಂದ ಮೇಕೆಯ ಕಿಲಾಡಿ ಕತೆ, ಡಾಕ್ಟರನ್ನೇ ಬೇಸ್ತು ಬೀಳಿಸಿದ ಬೆಕ್ಕು, ಖಿಲಾರಿ ಎತ್ತಿನ ಸೆಟೆಗಾಲು ಸರಿಗಾಲು, ಕುದುರೆವೈದ್ಯದ ಕೋಲ್ಮಿಂಚಿನ ಸಂದರ್ಭ ಹೀಗೆ ಕೃತಿಯ ಪುಟಪುಟದಲ್ಲೂ ವೆಟರಿನರಿ ಲೋಕದಲ್ಲಿ ಪೇಚು ಬಿದ್ದ ವೈದ್ಯರ ಕತೆಗಳಿವೆ.
ಡಾ. ಗಣೇಶ ಎಂ. ನೀಲೇಸರ ಅವರು ಮೂಲತಃ ಶಿರಸಿಯವರು. ವೃತ್ತಿಯಲ್ಲಿ ಪಶುವೈದ್ಯರು. ಹವ್ಯಾಸವಾಗಿ ಶುರುವಾದ ಬರವಣಿಗೆ ಮುಂದೆ ಇವರು ಲೇಖನಗಳು ಹಾಗೂ ಪುಸ್ತಕ ಬರೆಯುವಂತೆ ಮಾಡಿದೆ. ತಮ್ಮ ದಿನನಿತ್ಯದ ಬದುಕಿನಲ್ಲಿ ಅನುಭವವಾಗುವ ಸನ್ನಿವೇಶಗಳನ್ನು ಬರೆಯುವ ಇವರ ಬರಹಗಳು ಸಾಮಾನ್ಯವಾಗಿ ಹಾಸ್ಯದಿಂದ ಕೂಡಿರುತ್ತವೆ. ...
READ MORE