ಈ ಕೃತಿಯು ಲಲಿತ ಪ್ರಬಂಧಗಳ ಸಂಕಲನವಾಗಿದೆ. ತರ್ಲೆ ತಿಮ್ಮ ಎಂಬ ಕಾಲ್ಪನಿಕ ಪಾತ್ರದ ಮೂಲಕ ವೈವಿಧ್ಯಮಯ ಘಟನೆಗಳು ಹಾಗೂ ಪ್ರಸಂಗಗಳನ್ನು ಲೇಖಕರು ಹೆಣೆದಿದ್ದಾರೆ. ತಿಮ್ಮನ ಪಾತ್ರವನ್ನು ಬಳಸಿಕೊಂಡು ಲೇಖಕರು ಬದುಕಿನ ಸಂಕೀರ್ಣ ವೈರುಧ್ಯ, ದುರಂತ ಹಾಗೂ ವಿನೋದಗಳನ್ನು ವಿವರಿಸಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ಬದಲಾಗುವ ಸಾಮಾಜಿಕ-ಸಾಂಸ್ಕೃತಿಕ ಚಲನೆಯನ್ನು ಲೇಖಕರು ಬಿಚ್ಚಿಟ್ಟಿದ್ದಾರೆ ಇದು ಲೇಖಕರ ಸೂಕ್ಷ್ಮತೆಯನ್ನು ತಿಳಿಸುತ್ತದೆ.
ಅಜಮೀರ ನಂದಾಪುರ ಅವರು ಜನಿಸಿದ್ದು 1972 ಜೂನ್ 1ರಂದು. ಮೂಲತಃ ಗಂಗಾವತಿಯ ಕನಕಗಿರಿಯವರಾದ ಇವರು ಜನತಾ ಸೇವಾ ಅನುದಾನಿಕ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂದೆ ಶ್ಯಾಮೀದಸಾಬ ನಂದಾಪುರ,ತಾಯಿ ಹೊನ್ನುರುಬಿ. ಬಿ,ಎ, ಬಿ,ಎಡ್, ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾಹಿತ್ಯದ ಬಗ್ಗೆ ಅತೀವ ಆಸಕ್ತಿ ಇದ್ದ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಲವಾರು ದಿನಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆದಿರುವ ಇವರ ಪ್ರಮುಖ ಕೃತಿಗಳೆಂದರೆ ಹುಚ್ಚು ಮನಸ್ಸುಗಳು ಕವನ ಸಂಕಲನ, ತರ್ಲೆ ತಿಮ್ಮನ ಗಾಂಧಿ ಹೌಸ್, ತರ್ಲೆ ತಿಮ್ಮನ ಭಿ ಪಾರ್ಮ್ ಲಲಿತ ...
READ MOREಬಸವ ಜ್ಯೋತಿ ರಾಜ್ಯ ಪುರಸ್ಕಾರ