ಬೆಂಗಳೂರಿನಲ್ಲಿ ನೋಡುಗರ ಗಮನ ಸೆಳೆವ, ಸೆಳೆದಿರುವ ಸಂಗತಿಗಳು, ಸ್ಥಳಗಳು ಹಲವಾರಿವೆ. ಕಲಾವಿದ ರವಿಕುಮಾರ ಅವರ ಗಮನ ಸೆಳೆದದ್ದು ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು. ಇಂದು ಬಿಬಿಎಂಪಿ ಫ್ಲೆಕ್ಸ್ ತೆರವಿಗೆ ಕಠಿಣ ಕಾನೂನು ಜಾರಿಮಾಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸ್ತುತ ಬಟ್ಟೆ ಬ್ಯಾನರ್‌ಗಳನ್ನು ಮಾತ್ರ ಬಳಸಲು ಅವಕಾಶವಿದೆ. ಆದರೆ ವಿಷಯ ಏನಪ್ಪ ಅಂದರೆ ಈ ಬ್ಯಾನರ್‌ಗಳಲ್ಲಿ ಕಂಡುಬರುತ್ತಿದ್ದ ಭಾಷೆ, ಸಮುದಾಯ, ಜಾತಿ, ಸಿನಿಮಾ ನಾಯಕರ ಹೆಸರಲ್ಲಿ ಆರಂಭವಾಗಿರುವ ’ಸೇನೆ’ಗಳು. ವಿಷ್ಣು ಸೇನೆ, ಸಂಗೊಳ್ಳಿ ರಾಯಣ್ಣ ಸೇನೆ, ಹೀಗೆ ಹಲವಾರು ಸೇನೆಗಳ ಫ್ಲೆಕ್ಸ್‌ಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ.
ಸೇನಾ ಪರ್ವ ಕೃತಿಯು ರಾಜಕೀಯ ಫ್ಲೆಕ್ಸ್ ಬ್ಯಾನರ್‌ಗಳ ಮಾಧ್ಯಮ, ಸಂಯೋಜನೆ ಹಾಗೂ ವಸ್ತುಗಳನ್ನು ಕುರಿತು ಕನ್ನಡ ಮತ್ತು ಇಂಗ್ಲಿಷ್ ಪ್ರಬಂಧಗಳನ್ನು ಒಳಗೊಂಡಿದೆ. ಕಳೆದ ಒಂದು ದಶಕದಲ್ಲಿ ಲೇಖಕರು ತೆಗೆದ ಛಾಯಾಚಿತ್ರಗಳನ್ನು ಒಳಗೊಂಡಿದೆ. ಈ ಕೃತಿಯು ಹೆಚ್ಚಾಗುತ್ತಿರುವ ಆಕ್ರಮಣಕಾರಿ ಪ್ರವೃತ್ತಿ ಮತ್ತು ದೌರ್ಬಲ್ಯತೆಯನ್ನು ಗುರುತಿಸುತ್ತಾ ಬದಲಾಗುತ್ತಿರುವ ನಗರದ ಭಾವ ಚಿತ್ರವನ್ನು ಕಟ್ಟಿಕೊಡುತ್ತದೆ.
©2024 Book Brahma Private Limited.