‘ನನ್ನ ಹಾಡಿನ ಹಳ್ಳ’ ಕೃತಿಯು ಪ್ರೊ. ಚಂದ್ರಶೇಖರ ಪಾಟೀಲ ಅವರ ಲಲಿತ ಪ್ರಬಂಧಗಳನ್ನು ಹೋಲುವ ಬರಹಗಳ ಸಂಕಲನವಾಗಿದೆ.ಜನಪರ ಹಾಗೂ ಸಾಹಿತ್ಯಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಚಂಪಾ ಅವರ ಕಾಲಂಗಳು ಸಾಕಷ್ಟು ಜನಪ್ರಿಯಗಳಿಸಿದ್ದು, ‘ಚಂಪಾ ಕಾಲಂ’ ಸಂಕ್ರಮಣದಲ್ಲಿ ವಿಶೇಷ ಆಕರ್ಷಣೆ ಪಡೆದಿದೆ. ಈ ಕೃತಿಯು , ಇಂಗ್ಲಂಡಿನಲೊಬ್ಬ ಇಂಡಿಯನ್, ಪ್ರಶಸ್ತಿಗಳೂ-ಪ್ರಸಂಗಗಳೂ, ಕೀರ್ತಿವರ್ಧನ : ಗೋಡೆಗಳ ನೆರಳಲ್ಲಿ, ಗೆಸ್ಟ್ ಎಂಬ ಅತಿಥಿಯ ಅನುಭವ ಪುರಾಣ, ಸಂಕ್ರಮಣ ಚಂದಾಯಣ, ಕಲ್ಲೂರು ಲಕ್ಷ್ಮೀ ಮತ್ತು ರಾಷ್ಟ್ರಪತಿ, ನನ್ನ ಹಾಡಿನ ಹಳ್ಳ, ಶಾಲ್ಮಲಾ ನನ್ನ ಶಾಲ್ಮಲಾ, ಚೆಲುವಿಯ ಸುತ್ತ ಒಂದು ಲಹರಿ, ನೆನೆಯುದೆನ್ನಮನಂ ನಮ್ಮೂರವನು, ಒಂದು ತಂತಿಗೆ ಹನ್ನೆರಡೂವರೆ ಸಾವಿರ, ಅನಾರೋಗ್ಯವೇ ಭಾಗ್ಯ, ಮಾಗದರ್ಶನ ಮತ್ತು ಆತ್ಮಶಾಂತಿ, ಡೀಸಿ ಹೇಳಿದ ಕತೆ, ಕಾಂಟೆಸ್ಸಾ, ಮುನಿಯಪ್ಪ ಮತ್ತು ಸಿಟಿ ಮರ್ಚಂಟ್, ಅಂತರಾಳದ ಬೆಳಕು : ಕರ್ನಾಟಕ ಕಾಲೇಜು, ಕವಿಗೋಷ್ಠಿಗಳೆಂಬ ಪ್ರಸಂಗಗಳು, ಗುರು ಶಿಷ್ಯರೂ ಭಯ- ಭಕ್ತಿಗಳೂ, ಹನುಮಂತರಾಯನೊಂದಿಗೆ ಒಂದರ್ಧ ಗಂಟೆ, ಗೋಮಾತೆ ಮತ್ತು ಅಪ್ಪಾನ್ವೇಷಣೆ ಹೀಗೆ ಒಟ್ಟು 20 ಅಧ್ಯಾಯಗಳನ್ನು ಒಳಗೊಂಡಿದೆ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE