'ಭಾಷೆ ಬೇರೆ ಆತ್ಮವೊಂದೇ' ಎಂಬ ಲೇಖನದಲ್ಲಿ ಭಾಷಾಂತರದ ಎಡವಟ್ಟುಗಳನ್ನು, ಅನುವಾದವನ್ನು ನಮ್ಮದೇ ಮೂಲ ಎನ್ನುವಷ್ಟು ಸೊಗಸಾಗಿಸುವ ಪರಿಯನ್ನು ವಿವರಿಸುತ್ತಾರೆ. ಕನ್ನಡ ಅನುವಾದ ಜಗತ್ತಿಗೆ ದಿಗ್ಗಜರ ಕೊಡುಗೆಗಳನ್ನು ಸ್ಮರಿಸುತ್ತಾರೆ. ಭಾಷಾನುವಾದದ ಕುರಿತು ಮಾಹಿತಿಯೋಗ್ಯ ಬರಹ. ಇಲ್ಲಿನ ಬಹುತೇಕ ಬರಹಗಳು ಎಲ್ಲರ ಬದುಕಿನಲ್ಲಿ ನಿತ್ಯವೂ ನೋಡಲು ಸಿಗುವ ವಿಷಯಗಳೇ ಆಗಿವೆ. ಹೀಗಾಗಿ ಬಹಳ ಬೇಗ ಮನಸ್ಸಿಗೆ ತಲುಪುತ್ತವೆ. ಬದಲಿ ವ್ಯವಸ್ಥೆ' ಎಂಬ ಲೇಖನ ನಾವು ಹೇಗೆ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತೇವೆ ಎಂಬುದನ್ನು ವಿವರಿಸುತ್ತದೆ. ಗಟ್ಟಿಯಾದ ವಿವರಣೆಗಳೊಂದಿಗೆ, ಉದಾಹರಣೆಗಳೊಂದಿಗೆ ಲಘು ದಾಟಿಯ ಬರಹಗಳು ಇಲ್ಲಿವೆ. ಜಗತ್ತಿನಲ್ಲಿ ನಿತ್ಯವೂ ನಡೆಯುವ ನೂರೆಂಟು ಸಭೆ, ಸಮಾರಂಭಗಳು, ಅನುಕೂಲಕ್ಕೆ ತಕ್ಕಂತೆ ಅವುಗಳಲ್ಲಿನ ಮಾಪಾರ್ಡುಗಳು, ಸಭೆಗೆ ಇರಬೇಕಾದ ಗೌರವಗಳ ಕುರಿತು ವಿವರಿಸುವ ಸಭಾ ಮರ್ಯಾದೆ' ಲೇಖನ ಸಭೆಗಳ ಕುರಿತಾಗಿನ ಒಳನೋಟವನ್ನು ನೀಡುತ್ತದೆ.
ಸಿ.ಬಿ.ಶೈಲಾ ಜಯಕುಮಾರ್ ಅವರು ಮೂಲತಃ ಚಿತ್ರದುರ್ಗದವರು. MA (English) M Ed , Diploma in Journalism ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅವರು ಜೂನ್ 2020 ರಲ್ಲಿ ನಿವೃತ್ತಿ ಹೊಂದಿದರು. ಚಿತ್ರದುರ್ಗದ ಲೇಖಕಿಯರ ಕಥಾಸಂಕಲನದ 'ಮೊದಲ ಹೆಜ್ಜೆ' ಕೃತಿಯ ಸಂಪಾದಕಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ನುಡಿಗನ್ನಡಿ (ಆಕಾಶವಾಣಿಯ ನಲ್ನುಡಿಗಳ ಸಂಕಲನ), ಅಹಲ್ಯಾಂತರಂಗ, ಏಕಸೂತ್ರದಲ್ಲಿ ಅನೇಕ (ವೈಚಾರಿಕ ಲೇಖನಗಳ ಸಂಕಲನ) , ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ರಸಪ್ರಶ್ನೆಗಳು, ಉತ್ತರೆಯ ಸ್ವಗತ, ಇವರು ಚಿರಂಜೀವಿಗಳು.(ಪುರಾಣಗಳ ಚಿರಾಯುಗಳ ಬಗ್ಗೆ), ಅಂತಃಕರಣದ ...
READ MORE