ಲೇಖಕಿ ಸಮತಾ.ಆರ್ ಅವರ ಪ್ರಬಂಧ ಸಂಕಲನ ಪರಿಮಳಗಳ ಮಾಯೆ . ಲೇಖಕ ಡಾ ಪುರುಷೋತ್ತಮ ಬಿಳಿಮಲೆ ಅವರು ಈ ಕೃತಿಯಲ್ಲಿ ಮುನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಎಷ್ಟೋ ಬಾರಿ ಇಲ್ಲಿನ ಪ್ರಬಂಧಗಳನ್ನು ಓದುತ್ತಾ ನಾನು ನನ್ನಷ್ಟಕ್ಕೇ ಮುಗುಳ್ನಕ್ಕಿದ್ದುಂಟು. ಆದರೆ ಮರುಕ್ಷಣದಲ್ಲಿ ಒಂದು ಬಗೆಯ ವಿಷಾದಕ್ಕೂ ಜಾರಿದ್ದೇನೆ. ಇದು ಚಾರ್ಲಿ ಚಾಪ್ಲಿನ್ ಸಿನಿಮಾಗಳ ಹಾಗೆ; ನಗಿಸುವುದೊಂದೇ ಅವುಗಳ ಗುರಿಯಲ್ಲ. ಅದರೊಂದಿಗೆ ವಾಸ್ತವಗಳ ಬಗೆಗೆ ನಮ್ಮ ತಿಳುವಳಿಕೆಗಳನ್ನು ಅವು ಹೆಚ್ಚಿಸುತ್ತವೆ ಎಂಬುದಾಗಿ ಬರೆದಿದ್ದಾರೆ.
ಜನಿಸಿದ್ದು ಭದ್ರಾವತಿಯಲ್ಲಿ, 19/08/1976 ರಲ್ಲಿ. ಓದಿದ್ದು ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್. ಕೊಡಗಿನ ಸರ್ಕಾರಿ ಶಾಲೆಯೊಂದರಲ್ಲಿ ಕಳೆದ ಹದಿನೇಳು ವರ್ಷಗಳಿಂದ ಪ್ರೌಢಶಾಲಾ ಗಣಿತ ಶಿಕ್ಷಕಿ.ಪ್ರಸ್ತುತ ವಾಸ ಮೈಸೂರಿನಲ್ಲಿ. ಬರವಣಿಗೆ ಒಂದು ಹವ್ಯಾಸ. ಕೆಲವೊಂದು ಲಲಿತ ಪ್ರಬಂಧಗಳು ದಿನ ಪತ್ರಿಕೆ, ವಾರಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ ಪ್ರಕಟವಾಗಿವೆ.ಕನ್ನಡ ಕವಿತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸುವುದು ಖುಷಿ ಕೊಡುವ ಹವ್ಯಾಸ. ಕೃತಿ: ಪರಿಮಳಗಳ ಮಾಯೆ ...
READ MORE