‘ಲಘುಬಗೆ’ ಲೇಖಕಿ ರೇಶ್ಮಾ ಭಟ್ ಅವರ ಲಘು ಲಲಿತ ಪ್ರಬಂಧಗಳ ಸಂಕಲನ. ಈ ಕೃತಿಗೆ ಬಿ.ಎಸ್. ಜಯಪ್ರಕಾಶ ನಾರಾಯಣ ಅವರ ಮುನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ ಜನ ಕಾವ್ಯವನ್ನು ಓದಲಿ, ಓದದೇ ಇರಲಿ, ಆದರೆ ಇಂತಹ ಕಾವ್ಯಾತ್ಮಕವಾದ ಭಾಷೆಯನ್ನು ಮಾತ್ರ ಯಾವಾಗಲೂ ಇಷ್ಟಪಡುತ್ತಾರೆ. ಒಬ್ಬ ಓದುಗ ಸಾಹಿತ್ಯದಿಂದ ಬಯಸುವುದೇನೆಂದರೆ, ಓದಿ ಹಗುರಾಗುವುದನ್ನು, ಬದುಕು ಹಸನಾಗಿದೆ ಎನ್ನುವ ಸರಳ ಸತ್ಯದ ಸಾಕ್ಷಾತ್ಕಾರವನ್ನು, ಸಮಾಜ, ಬದುಕು ಎಲ್ಲದರಲ್ಲೂ ಚೆಲುವಿದೆ ಎನ್ನುವಂತಹ ತನ್ನನ್ನು ಪೊರೆಯುವ ಅರಿವನ್ನು ಈ ಪ್ರಬಂಧಗಳು ಇಂತಹ ಶಕ್ತಿಯನ್ನು ಪಡೆದಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು ಎಂದಿದ್ದಾರೆ ಬಿ.ಎಸ್. ಜಯಪ್ರಕಾಶ ನಾರಾಯಣ. ಇಲ್ಲಿ ಕಸಬರಿಕೆಯೆಂಬ ಕಸವರ, ಅಡುಗೆ ಯಜ್ಞಕ್ಕೊಂದು ಪೂರ್ಣಾಹುತಿ, ಮೂಗಿನಾಳವ ಬಗೆದಾಗ, ಧೂಮದೊಂದಿಗೊಂದು ಯಾನ, ಮಶಕವೆಂಬ ಮಾಯೆ ಕಚ್ಚಿ ಕೂಗದೇ ನರರಂ, ಮುನ್ನುಡಿಯ ಪ್ರೀ-ಫೇಸುಗಳು, ನಾಲಿಗೆ ಪೀಳಿಗೆಗಳ ನಡುವೆ, ಸಮ್ಮಾನ ಸಂಹಿತೆ, ಪ್ರೇಮದ ಫಿಲಾಸಫಿ, ಕ್ವಾರಂಟೈನ್ ಕನಸು, ಬೆನಕನೂ ಬೆಕ್ಕಿಗೆರಗುವನು, ಲಾಕ್ಡೌನ್ ಅಡುಗೆಯೂ ಬೆಚ್ಚಿ ಬೀಳುವ ಸುದ್ದಿಗಳೂ, ಮಣೆಯ ಮೇಲೆ ಮಣೆಯ ಪೇರಿಸಿ, ಅಕ್ಕರೆಗೊಂದು ಪಕ್ಕಾ ಹೆಸರು, ತಪ್ಪದ ದಾರಿಯೊಂದು ಬೇಕು ಆಯ್ದುಕೊಡಿ, ರ್ಯಾಸ್ಕಲ್ ರಗಳೆ, ಅಪ್ ವರ್ಡ್ ಡೌನ್ ವರ್ಡ್ ಗಳ ಜೊತೆ, ಲ್ಯಾಪ್ ಟಾಪ್ ಹಾಗೂ ಸೀಮೆಸುಣ್ಣ, ಡೌಟಲ್ಲಿ ಬಿ ಬೇಕಾ, ಮೈಚಳಿ ಸಾಹಿತ್ಯ ಎಂಬ 20 ಲಲಿತ ಪ್ರಬಂಧಗಳು ಸಂಕಲನಗೊಂಡಿವೆ.
©2024 Book Brahma Private Limited.