‘ತೂರಿದ ಚಿಂತನಗಳು’ ರಾ.ಯ ಧಾರವಾಡಕರ ಅವರ ರಚನೆಯ ಪ್ರಬಂಧ ಸಂಕಲನವಾಗಿದೆ. 'ಈ ಸಂಕಲನದ ಹರಹು ದೊಡ್ಡದು; ಪ್ರಣಯದಿಂದ ವೈರಾಗ್ಯದವರೆಗೆ ಹರಡಿಕೊಂಡಿದೆ. ಎಷ್ಟು ವಿಷಯಗಳು, ಎಷ್ಟು ಉದಾಹರಣೆಗಳು ಅದ್ದನ್ನೂ ಕೂಡಿಸಿ ಒಪ್ಪ ಓರಣಗಳಿಂದ ಕಟ್ಟಿಕೊಟ್ಟಿರುವ ಲೇಖಕರ ಸಾರ್ಥಕ ಪ್ರಯತ್ನವನ್ನು ಮೆಚ್ಚಿ ಈ ಪ್ರಬಂಧ ಸಂಕಲನವನ್ನು ಸಂತೋಷದಿಂದ ಬರಮಾಡಿಕೊಳ್ಳೋಣ' ಎನ್ನುತ್ತಾರೆ ಸಾಹಿತಿ ಹಂಪ ನಾಗರಾಜಯ್ಯ .
ಭಾಷಾಶಾಸ್ತ್ರ, ರಾಜಕಾರಣ, ಅರ್ಥಶಾಸ್ತ್ರ, ಪತ್ರಿಕೋದ್ಯಮ ಹಾಗೂ ಕನ್ನಡ ಭಾಷಾ ಸಾಹಿತ್ಯದ ಕುರಿತು ಅಧ್ಯಯನ ನಡೆಸಿದವರಲ್ಲಿ ಪ್ರಮುಖರು ರಾ, ಯ. ಧಾರವಾಡಕರ್ ಅವರು. ಇವರು ಜನಿಸಿದ್ದು 1919 ಜುಲೈ 15ರಂದು. ತಂದೆ ಯಲಗುರ್ದರಾವ್, ತಾಯಿ ಗಂಗಾಬಾಯಿ. ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮುಂಬೈ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಸಾಂಗ್ಲಿಯ ವಿಲ್ಲಿಂಗ್‌ಡನ್‌ನಲ್ಲಿ ಬಿ.ಎ. ಪದವಿ ಪಡೆದರು. ಕನ್ನಡ ಹಾಗೂ ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಇವರು ಪತ್ರಿಕಾ ವ್ಯವಸಾಯ, ಕರ್ನಾಟಕದಲ್ಲಿ ವೃತ್ತ ಪತ್ರಿಕೆಗಳು, ಸಾಹಿತ್ ಸಮೀಕ್ಷೆ, ಕನ್ನಡ ಭಾಷಾ ಶಾಸ್ತ್ರ, ಧೂಮ್ರವಲಯಗಳು, ತೂರಿದ ಚಿಂತನೆಗಳು, ನವಿಲುಗರಿ ...
READ MORE