ಅಂತಃಕರಣ ಕ್ರೀಡಾ ಅಂಕಣ ಪ್ರಬಂಧಗಳ ಸಂಕಲನ ‘ಆಟದ ನೋಟ’. ಶಾಲಾ ದಿನಗಳಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಅಂತಃಕರಣ, ತನ್ನ ಇಷ್ಟದ ಕ್ರೀಡೆಗಳ ಬಗ್ಗೆ ಅಂಕಣಗಳನ್ನು ಬರೆಯುತ್ತಾರೆ. ತನ್ನ ಬರವಣಿಗೆಯ ಹಾದಿಯಲ್ಲಿ ತಾನೇ ಮುಂದಾಗಿ ಮೂರ್ನಾಲ್ಕು ಕವಲು ದಾರಿಗಳನ್ನು ನಿರ್ಮಿಸಿಕೊಂಡಿರುವ ಅಂತಃಕರಣ, ಯಾವ ದಾರಿ ಹೊಕ್ಕರೂ ಮತ್ತೆ ಮರಳಿ ಮುಖ್ಯಮಾರ್ಗಕ್ಕೆ ಬರಬಲ್ಲ ಸ್ವಸಾಮರ್ಥ್ಯ ಪಡೆಯಬಲ್ಲಾತ. ಕ್ರೀಡೆಯನ್ನು ಬರೆಯಬಲ್ಲವರ ನಡುವೆ ಅಂತಃಕರಣ ಕ್ರೀಡಾ ಲೋಕದ ವಿಭಿನ್ನ ವಿಚಾರಗಳನ್ನು ಆರಿಸಿ ಲವಲವಿಕೆಯಿಂದ ಬರೆಯುತ್ತಾರೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE