‘ಕನ್ನಡದಲ್ಲಿ ಜನಪ್ರಿಯ ಸಾಹಿತ್ಯ’ ಬರಗೂರು ರಾಮಚಂದ್ರಪ್ಪ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಪ್ರಕಟಿಸಿದ ಕೃತಿ. ರಾಜ್ಯದ ವಿವಿಧ ಕಡೆಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಏರ್ಪಡಿಸಿದ್ದ ವಿಚಾರ ಸಂಕಿರಣಗಳಲ್ಲಿ ಮಂಡಿತವಾದ ಪ್ರಬಂಧಗಳ ಸಂಕಲನ ಇದಾಗಿದೆ.
. ದಿನಾಂಕ 5-09- 1993ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದ ಕನ್ನಡದಲ್ಲಿ ಜನಪ್ರಿಯ ಸಾಹಿತ್ಯ ಎಂಬ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳು ಇಲ್ಲಿವೆ. ಪ್ರಧಾನ ಸಂಪಾದಕರು ಬರಗೂರು ರಾಮಚಂದ್ರಪ್ಪ. ಇಲ್ಲಿ ಕೆ.ವಿ. ನಾರಾಯಣ ಅವರ ಜನಪ್ರಿಯ ಸಾಹಿತ್ಯವನ್ನು ಕುರಿತು, ಡಾ. ರಹಮತ್ ತರೀಕೆರೆ ಅವರ ಜನಪ್ರಿಯ ಸಾಹಿತ್ಯ ಮತ್ತು ನಮ್ಮ ಸಾಮಾಜಿಕ ಸಂದರ್ಭ, ಬಿ. ಭಾಸ್ಕರರಾವ್ ಅವರ ಜನಪ್ರಿಯ ಸಾಹಿತ್ಯ ಆಧುನಿಕತೆ ಮತ್ತು ಅಭಿರುಚಿ, ಶ್ರೀ ಚಂದ್ರಶೇಖರ ಆಲೂರು ಅವರ ಜನಪ್ರಿಯ ಸಾಹಿತ್ಯ ಮತ್ತು ಪತ್ರಿಕೋದ್ಯಮ, ಶೇಷ ನಾರಾಯಣ ಅವರ ಜನಪ್ರಿಯ ಸಾಹಿತ್ಯದ ಒಳಗೆ, ಕೆ.ಟಿ. ಗಟ್ಟಿ ಅವರ ಜನಪ್ರಿಯತೆ ಅಳತೆಗೋಲು ಯಾವುದು, ನಾ. ಡಿಸೋಜ ಅವರ ಜನಪ್ರಿಯ ಸಾಹಿತ್ಯ ಒಂದು ಚರ್ಚೆ ಸೇರಿದಂತೆ ಹಲವು ಗಣ್ಯ ಲೇಖಕರ ಪ್ರಬಂಧಗಳಿವೆ.
ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...
READ MORE