‘ಜೀವನ ಸಂಧ್ಯಾ’ ಕೃಷ್ಣ ಮೂರ್ತಿ ಕಿತ್ತೂರ ಅವರ ಲಲಿತ ಪ್ರಬಂಧಗಳಾಗಿವೆ. ಮಾಗಿದ ವ್ಯಕ್ತಿತ್ವದ ಅನುಭವದ ಅನೇಕ ಪ್ರಸಂಗಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
ಲೇಖಕ ಕೃಷ್ಣಮೂರ್ತಿ ಕಿತ್ತೂರ ಅವರು ಕರ್ನಾಟಕ ವಿಶ್ವವಿದ್ಯಾಲಯ ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಬಿ.ಎ, ಎಂ.ಎ ಪರೀಕ್ಷೆಗಳನ್ನು ಉಚ್ಚ ಶ್ರೇಣಿಗಳಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮಸ್ಥಾನ ಪಡೆದು ಪಾಸಾಗಿದ್ದ ಕಿತ್ತೂರ ಅವರಿಗೆ ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚಿತ್ತು. ವಿದ್ಯಾರ್ಥಿದೆಸೆಯಲ್ಲಿಯೇ ಹಲವಾರು ಸಣ್ಣಕತೆ, ವಿಮರ್ಶೆ, ವ್ಯಕ್ತಿಚಿತ್ರ ಮೊದಲಾದವುಗಳನ್ನು ರಚಿಸಿದ್ದ ಅವರು ಕನ್ನಡ ಓದುಗರಿಗೆ ಚಿರಪರಿಚಿತರು. ಗಳಗನಾಥರ ಕಾದಂಬರಿಗಳನ್ನು ಕುರಿತು ಮಹಾಪ್ರಬಂಧ ರಚಿಸಿರುವ ಕೃಷ್ಣಮೂರ್ತಿ ಕಿತ್ತೂರ ಅವರು ಕನ್ನಡದ ಸೃಜನಾತ್ಮಕ ಮತ್ತು ವಿಮರ್ಶಾಕ್ಷೇತ್ರದಲ್ಲಿ ಮಹತ್ತರ ಕೃಷಿಮಾಡಿದ್ದಾರೆ. ...
READ MOREಹೊಸತು- ಆಗಸ್ಟ್- 2002
ಲೇಖಕರ ಹಾಸ್ಯಮಿಶ್ರಿತ ಧಾಟಿ ಪುಸ್ತಕವೋದುತ್ತಿದ್ದರೂ ಅವರೇ ಕುಳಿತು ನಮ್ಮೊಂದಿಗೆ ಆತ್ಮೀಯ ಸಂವಾದ ನಡೆಸುತ್ತಿದ್ದಾರೇನೋ ಎನ್ನುವಂತಿದೆ. ಲವಲವಿಕೆ ಮೂಡಿಸುತ್ತ, ಆಸಕ್ತಿಯನ್ನು ಉಂಟುಮಾಡುತ್ತ ಓದುಗನನ್ನು ತನ್ನೊಂದಿಗೆ ಕರೆದೊಯ್ಯುವ ಲೇಖಕರು ತಾವು ಅನುಭವಿಸಿದ ಕೆಲ ಸ್ವಾರಸ್ಯ ಪ್ರಸಂಗಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮಾಗಿದ ವ್ಯಕ್ತಿತ್ವದ ಅನುಭವದ ಮೂಸೆಯಿಂದೆದ್ದು ಬಂದ ಬರಹಗಳು. ಅನೇಕ ಪ್ರಸಂಗಗಳು ಒಂದು ತಲೆಮಾರಿನಷ್ಟು ಹಳೆಯವು. ಇಂದಿನ ಸಂಕೀರ್ಣ ಬದುಕಿಗೆ ಹೀಗೂ ಉಂಟೇ ಅನ್ನಿಸುವಂಥವು.