ಎಸ್.ಎಸ್. ಅಂಗಡಿ ಅವರ ಸಂಪ್ರಬಂಧಗಳ ಸಂಪುಟ ಕೃತಿ ʻಕರ್ನಾಟಕ ಗ್ರಂಥಸಂಪಾದನೆʼ. ಕರ್ನಾಟಕದ ಗ್ರಂಥಸಂಪಾದನೆಯ ಸಾತತ್ಯವನ್ನು ಇಲ್ಲಿ ನಾಲ್ಕು ಮಾದರಿಯ ಬರಹಗಳಲ್ಲಿ ಗುರುತಿಸಬಹುದು; ಒಂದು, ಗ್ರಂಥಸಂಪಾದನೆಯನ್ನು ಕುರಿತಂತೆ ಸೈದ್ಧಾಂತಿಕ ಚರ್ಚೆಯನ್ನು ಬೆಳೆಸಿದವುಗಳು. ಎರಡನೆಯದು, ಪಾಠ ಪರಿಷ್ಕರಣಕ್ಕೆ ಸಂಬಂಧಿಸಿದವು. ಮೂರನೆಯದು, ಜನಪದಸಾಹಿತ್ಯ ಸಂಪಾದನೆಗೆ ಸಂಬಂಧಿಸಿದವುಗಳು. ರಚನೆಯ ದೃಷ್ಟಿಯಿಂದ ಇಲ್ಲಿಯ ಬಹುತೇಕ ಸಂಪ್ರಂಧಗಳು ಸಂಶೋಧನಾತ್ಮಕವಾದುವು. ಹಸ್ತಪ್ರತಿಶಾಸ್ತ್ರವನ್ನು ಕುರಿತಂತೆ ಅದರಲ್ಲೂ ವಿಶೇಷವಾಗಿ ಗ್ರಂಥಸಂಪಾದನಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಅನೇಕ ಹೊಸ ಮೌಲಿಕ ಸಂಗತಿಗಳನ್ನು ಹೇಳುತ್ತವೆ.
ಪ್ರೊ. ಎಸ್.ಎಸ್. ಅಂಗಡಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಪ್ರಾಚೀನ ಸಾಹಿತ್ಯ, ಹಸ್ತಪ್ರತಿ ಗ್ರಂಥ ಸಂಪಾದನೆ, ಭಾಷಾಶಾಸ್ತ್ರ ಬಗೆಗೆ ಅಪಾರ ಪಾಂಡಿತ್ಯ ಹೊಂದಿರುವ ಅವರು 'ಸರಳ ಶಬ್ದಮಣಿ ದರ್ಪಣ', 'ಕನ್ನಡ ಹಸ್ತಪ್ರತಿ ಭಾಷಿಕ ವಿವೇಚನೆ', 'ಕರ್ನಾಟಕ ಗ್ರಂಥ ಸಂಪಾದನೆ', 'ಸರಳ ಕವಿರಾಜಮಾರ್ಗ' ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು ಪ್ರಕಟಿಸಿದ ಸಂಶೋಧನಾ ಲೇಖನಗಳು ಹೀಗಿವೆ: ಗ್ರಂಥಸಂಪಾದನೆ : ಕೆ.ಜಿ.ಕುಂದಣಗಾರ, ಕೆ.ಜಿ.ಕುಂದಣಗಾರ ಅಧ್ಯಯನ ವಿಧಾನ, ಹರ್ಮನ್ ಮೋಗ್ಲಿಂಗ್ ಸಂಶೋಧನ ವೈಧಾನಿಕತೆ, ಗ್ರಂಥ ಸಂಪಾದನೆ: ಶಿ.ಚ.ನಂದಿಮಠ, ಗ್ರಂಥ ಸಂಪಾದನೆ: ಗೊರೆಬಾಳ್ ಹನುಮಂತರಾಯ, ಗ್ರಂಥ ಸಂಪಾದನೆ: ಎನ್.ಅನಂತರಂಗಾಚಾರ್, ಕರ್ನಾಟಕ ಕವಿಚರಿತೆ: ರಚನೆಯ ...
READ MORE