‘ಶೌಚಾಲಯ ತಪಸ್ವಿ ಮತ್ತು ಇತರ ಪ್ರಬಂಧಗಳು’ ಲೇಖಕ ಈರಪ್ಪ ಎಂ. ಕಂಬಳಿ ಅವರ ಕೃತಿ. ಇಲ್ಲಿನ ಪ್ರಬಂಧಗಳು ತಿಳಿ ಹಾಸ್ಯದೊಂದಿಗೆ ಸೂಕ್ಷ್ಮ ವಿಚಾರಗಳನ್ನು ತೆರೆದಿಡುತ್ತದೆ. ಬಯಲು ಶೌಚ ಮುಕ್ತ ಎಂಬ ಯೋಜನೆ ಬೇರೆಯದ್ದೇ ಹಾದಿ ಹಿಡಿದಿದೆ. ಜೊತೆಗೆ ಆಧುನೀಕರಣ ಎಂಬ ಹೆಸರಿನಲ್ಲಿ ಹಳ್ಳಿ ಬದುಕನ್ನು ಇಲ್ಲವಾಗಿಸುತ್ತಿರುವ ಸೂಕ್ಷ್ಮ ವಿಚಾರಗಳನ್ನು ಲೇಖಕರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗದವರಾದ ಈರಪ್ಪ ಕಂಬಳಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದವರು. ಅರೆಸತ್ತ ಬದುಕು ಅವರ ಪ್ರಥಮ ಕವನ ಸಂಕಲನ. ಹೆದ್ದಾರಿಗುಂಟ, ಹೀಗೊಂದು ಟಾಪ್ ಪಯಣ, ಚಾಚಾ ನೆಹರು ಮತ್ತು ಈಚಲ ಮರ, ಹುರುಳಿಕಟ್ಟು ಅವರ ಪ್ರಬಂಧ ಸಂಕಲನಗಳು. ಕರ್ನಾಟಕ ಸರ್ಕಾರದ ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಅವರು ಸದ್ಯ ನಿವೃತ್ತರಾಗಿದ್ದಾರೆ. ...
READ MORE