ಮೂರನೇ ಕಣ್ಣು

Author : ಚಿದಾನಂದ ಸಾಲಿ

Pages 124

₹ 120.00




Year of Publication: 2018
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

ಕನ್ನಡ ಲೇಖಕ, ಅನುವಾದಕರಾದ ಚಿದಾನಂದ ಸಾಲಿಯವರು ಸಾಹಿತ್ಯ, ವೈದ್ಯಕೀಯ, ಇತಿಹಾಸ, ಗತಾನುಭವ, ಸೂಕ್ತಿ ಸಂಗ್ರಹ ಮುಂತಾದ ಅನೇಕ ವಿಷಯಗಳನ್ನು ಕುರಿತಾದ ಪ್ರಬಂಧ ಲೇಖನಗಳನ್ನುಈ ಪುಸ್ತಕದಲ್ಲಿ ರಚಿಸಿದ್ದಾರೆ. ಪ್ರಕೃತಿ ಮೀಮಾಂಸೆ ಅದರ ಎಲ್ಲಾ ಆಯಾಮಗಳನ್ನು, ಮತ್ತು ಭಾರತೀಯ ಸಮಾಜಶಾಸ್ತ್ರಕ್ಕೆ ಸೇರಿಸಬಹುದಾದ  ಅಂಶಗಳನ್ನು, ಜಾತಿವಿವಾದಗಳು, ಜಾತಿಸೂತಕದ ಅಂಶಗಳು, ಇವೆಲ್ಲವೂ ಸಮಾಜ ಧೋರಣೆಯ ಬಗ್ಗೆ ಮಾಹಿತಿಪೂರ್ಣವಾಗಿಯೂ, ಅಷ್ಟೇ ಸ್ವಾರಸ್ಯದಾಯಕವಾಗಿಯೂ ಸಾಲಿಯವರ ’ಮೂರನೇ ಕಣ್ಣು’ ಪುಸ್ತಕದಲ್ಲಿ ಕಾಣಬಹುದು. ಲೇಖಕರೇ ಹೇಳುವಂತೆ ಇಲ್ಲಿಯ ಪ್ರತಿ ಪ್ರಬಂಧವು ತಮ್ಮನ್ನು ನಿರಾಳವಾಗಿಸಿದೆ. ಸಣ್ಣ ಕತೆ ಬರೆದಷ್ಟೇ ಖುಷಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಖ್ಯಾತ ಲೇಖಕ ನಾಗೇಶ ಹೆಗಡೆ ಕೃತಿಯ ಮುನ್ನುಡಿಯಲ್ಲಿ ’ಐದೋ-ಆರೋ ಮಾಸ್ಟರ್ ಡಿಗ್ರಿಗಳನ್ನು ಅದಕ್ಕೂ ಹೆಚ್ಚು ಪುರಸ್ಕಾರ-ಪ್ರಶಸ್ತಿಗಳನ್ನೂ, ಅವೆಲ್ಲಕ್ಕಿಂತ ಹೆಚ್ಚು ಸಾಹಿತ್ಯ ಕೃತಿಗಳನ್ನು ಗರಿಗಳಂತೆ ಹಗುರವಾಗಿ ಧರಿಸಿದ ಈ ಯುವ ಸಾಹಿತಿಗೆ ಹೊಗಳಿಕೆಯ ಭಾರ ಯಾಕೆ ಹೊರಿಸೋಣ ಹೇಳಿ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books