'ಹೊಂಬಳ್ಳಿ' ಹಿರಿಯ ಲೇಖಕಿ ಎಂ.ಆರ್. ಕಮಲ ಅವರ ಹಗುರ ಪ್ರಬಂಧಗಳ ಸಂಕಲನ. ಬಯಲು ಸೀಮೆಯ ಬೇಲಿಗಳಲ್ಲಿ, ತೆಂಗಿನ ತೋಟಗಳಲ್ಲಿ, ಎಲ್ಲೆಂದರಲ್ಲಿ ಹಬ್ಬುವ ಬಳ್ಳಿಯೇ `ಹೊಂಬಳ್ಳಿ’. ತೋಟದಲ್ಲಿ ಬಿದ್ದಿರುವ ಕುರುಂಬಾಳೆ, ಹೆಡೆಮಟ್ಟೆ, ಸೀಬಿ, ಸೋಗೆ ಮುಂತಾದ ತೆಂಗಿನ ಭಾಗಗಳನ್ನು ಹೊರೆ ಕಟ್ಟಲು ಈ ಬಳ್ಳಿಯನ್ನು ಬಳಸುತ್ತಾರೆ. ಈ ಹೊರೆಯಲ್ಲಿ ನಿರ್ದಿಷ್ಟ ವಸ್ತುಗಳು ಇರಬೇಕೆಂಬ ನಿಯಮವಿಲ್ಲ. ಗಟ್ಟಿಯಾದ ಈ ಬಳ್ಳಿ ಎಲ್ಲವನ್ನು ಬಿಗಿಯಾಗಿ ಹಿಡಿದಿಡಬಲ್ಲದು. ಹಾಗಾಗಿ ಅನೇಕ ವಿಷಯಗಳನ್ನು ಒಟ್ಟಾಗಿಸಿರುವ ಈ ಪ್ರಬಂಧ ಸಂಕಲನಕ್ಕೆ `ಹೊಂಬಳ್ಳಿ’ ಎಂದು ಹೆಸರಿಟ್ಟಿದ್ದೇನೆ ಎಂದಿದ್ದಾರೆ.
ಕವಿ-ಅನುವಾದಕಿಯಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಎಂ.ಆರ್. ಕಮಲಾ ಅವರು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. 1959ರ ಮಾರ್ಚ್ 27ರಂದು ಜನಿಸಿದರು. ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ ಚಿನ್ನದ ಪದಕ ವಿಜೇತರು. ಫ್ರೆಂಚ್ ಭಾಷೆಯಲ್ಲಿ ಪದವೀಧರರು. ಶಕುಂತಲೋಪಾಖ್ಯಾನ (1988), ಜಾಣೆ ಮತ್ತು ಇತರ ಕವಿತೆಗಳು (1992), ಹೂವು ಚೆಲ್ಲಿದ ಹಾದಿ (2007), ಮಾರಿಬಿಡಿ (2017) ಕವನ ಸಂಕಲನಗಳು. ಆಫ್ರಿಕನ್-ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ’ಕತ್ತಲ ಹೂವಿನ ಹಾಡು (1989) ...
READ MORE