`ಹೊಳೆ ಬಾಗಿಲು' ಕೃತಿಯು ಸುಶ್ರುತ ದೊಡ್ಡೇರಿ ಅವರ ಲಲಿತಪ್ರಬಂಧಗಳ ಸಂಕಲನವಾಗಿದೆ. ಕೃತಿಯ ಕುರಿತರು ವಿನಾಯಕ ಅರಳಸುರಳಿ ಅವರು ಹೀಗೆ ಹೇಳುತ್ತಾರೆ : 'ಹೊಳೆ ಬಾಗಿಲು'ವಿನಲ್ಲಿನ ಪ್ರಬಂಧಗಳು ಹಲವಾರು ವಿಚಾರಗಳನ್ನು ಪ್ರಸ್ತುತಪಡಿಸುತ್ತದೆ. ಹೊಳೆಯ ಆಚೀಚೆ ಕಾಣುವ ಕಾಡು, ಬೆಳ್ಳಕ್ಕಿ, ಮೀನುಗಳಂತೆಯೇ ನಮ್ಮ ಬದುಕು, ಬಾಲ್ಯದ ಎಷ್ಟೋ ಸುಂದರ ಚಿತ್ರಗಳು ಈ ಪುಸ್ತಕವ ದಾಟುವಾಗ ಕಣ್ಣೆದುರು ಹಾಯುತ್ತವೆ. ಆಸ್ಪತ್ರೆಯ ನಾಲ್ಕು ಗೋಡೆಗಳ ನೀರಸ ನಿರ್ಭಾವುಕತೆಯಿಂದ ಬಚಾವಾಗಲೆಂದು ಇದನ್ನು ಹಿಡಿದು ಕುರ್ಚಿಗೊರಗಿದವನು ಮತ್ತೆ ಎದ್ದಿದ್ದು ಒಮ್ಮೆ ಬಾಲ್ಯದಲ್ಲಿ. ಮತ್ತೊಮ್ಮೆ ಅಡಿಕೆ ತೋಟದಲ್ಲಿ. ಮಗದೊಮ್ಮೆ ಬೆಂಗಳೂರಿನ ಟೆರಾಸು ಕೋಣೆಯಲ್ಲಿ. ಕೊನೆಗೆ- ಹೊಳೆಬಾಗಿಲಿನಲ್ಲಿ! ಹೀಗೆ ಎಲ್ಲವನ್ನೂ ಕೂಡ ಅಚ್ಚುಕಟ್ಟಾಗಿ ವಿವರಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಶ್ರತ ದೊಡ್ಡೇರಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಬರೆಯುವುದು, ಓದುವುದು ಅವರ ಹವ್ಯಾಸ. ವೃತ್ತಿಯಲ್ಲಿ ವಕೀಲರು. ಕೃತಿಗಳು : ಹೊಳೆ ಬಾಗಿಲು ...
READ MORE