ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ

Author : ಜಿ.ಎಸ್. ಗೋನಾಳ

Pages 218

₹ 250.00




Year of Publication: 2022
Published by: ಜಿ. ಎಸ್ ಗೋನಾಳ
Address: ಜಿ. ಎಸ್. ಗೋನಾಳ , ಶ್ರೀ ಬಸವ ಸದನ, ಪದಕೀ ಲೇಜೌಟ್, ಕೊಪ್ಪಳ

Synopsys

ಸಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ’ ಜಿ.ಎಸ್.ಗೋನಾಳ ಅವರ ಕೃತಿಯಾಗಿದೆ. ಇದಕ್ಕೆ ‘ಸಿದ್ದನಗೌಡ ಪಾಟೀಲ’ ಅವರ ಬೆನ್ನುಡಿ ಬರಹವಿದೆ; ಪತ್ರಕರ್ತ, ಪತ್ರಿಕೋದ್ಯಮ, ಪತ್ರಿಕೆ ಮೂರು ಇಂದು ಕವಲು ದಾರಿಯಲ್ಲಿ ಇವೆ. ಅನೇಕ ಸವಾಲುಗಳು ಇವೆ. ಎಲ್ಲ ವಿರೋಧ, ಪರಕ್ಕೆ ಮಾಧ್ಯಮವನ್ನು ಹೊಣೆಗಾರಿಕೆ ಮಾಡುವ, ದೂಷಣೆ ಮಾಡುವ ಸಿನಿಕತನ ಕಾಣುತ್ತಿದ್ದೇವೆ. ಈ ಸಂದರ್ಭದಲ್ಲಿ 'ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ' ಪುಸ್ತಕ ಸಮಸ್ಯೆಗಳ ಅನಾವರಣ ಮಾಡುತ್ತಿದೆ. ಜಿ.ಎಸ್.ಗೋನಾಳ ಅವರು ಉತ್ಸಾಹಿ ಪತ್ರಕರ್ತ, ಉತ್ತಮ ಸಂಘಟಕ, ಸಾಮಾಜಿಕ ಸೇವೆಯಲ್ಲಿ ಸಾರ್ಥಕತೆಯನ್ನು ಕಂಡ ಅವರು ಈಗಾಗಲೇ ತಮ್ಮ ಬರಹ ಕೃತಿಗಳ ಮೂಲಕ ಸಮಾಜದ ವಿವಿಧ ಸ್ತರಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಪತ್ರಕರ್ತರ ಕ್ಷೇತ್ರದಲ್ಲಿನ ಆದರ್ಶ, ವೃತ್ತಿ, ಬದ್ಧತೆಗಳ ತವಕ ತಲ್ಲಣವನ್ನು ತಮ್ಮ ಸರಳ ನಿರೂಪಣಾ ಶೈಲಿಯಲ್ಲಿ ವಿಷದವಾಗಿ ಕೃತಿಗೆ ಇಳಿಸಿದ್ದಾರೆ. ಪತ್ರಿಕೋದ್ಯಮ ಒಂದು ತಪ್ಪಸ್ಸಿನಂತೆ. ಸಾಮಾಜಿಕ ಕಾಳಜಿಯ ಜೊತೆಗೆ ಬದಲಾವಣೆ ತರಬೇಕು ಎಂಬ ತುಡಿತದೊಂದಿಗೆ ಪತ್ರಕರ್ತನಾಗಿ ಆರಂಭದಲ್ಲಿ ದುಡಿದರೂ ಇಂದು ಪತ್ರಿಕೆ ಉದ್ಯಮದ ಸ್ವರೂಪವನ್ನು ಪಡೆದಿರುವುದರಿಂದ ಸವಾಲುಗಳು ಎದುರಾಗಿರುವುದು ಸಧ್ಯದ ವಾಸ್ತವ. ಈ ಹಿನ್ನಲೆಯಲ್ಲಿ ಗೋನಾಳ ಅವರು ತಮ್ಮ ಕೃತಿಯಲ್ಲಿ ತಲ್ಲಣಗಳು ಮತ್ತು ವಾಸ್ತವ ಮುಖಾಮುಖಿಯಾಗಿಸಿರುವುದು ಕೃತಿಯ ವೈಶಿಷ್ಟ್ಯವಾಗಿದೆ.

About the Author

ಜಿ.ಎಸ್. ಗೋನಾಳ

ಜಿ.ಎಸ್. ಗೋನಾಳ ಅವರು ಕ್ರಿಯಾಶೀಲ ಪತ್ರಕರ್ತ, ಸಮಾಜಮುಖಿ ಚಿಂತಕ, ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಮೂಲತಃ ಕೊಪ್ಪಳ ತಾಲೂಕಿನ ಮಾದಿನೂರಿನ ಅಪ್ಪಟ ಗ್ರಾಮೀಣ ಕೃಷಿಕ ಮನೆತನದ ಹಿನ್ನೆಲೆಯವರು. ಧಾರವಾಡ, ಕೊಲ್ಲಾಪುರ ಮಹಾವಿದ್ಯಾಲಯಗಳಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೊಪ್ಪಳ ಜಿಲ್ಲಾ ವಾರ್ತಾ ಪತ್ರಿಕೆಯ ಮೂಲಕ ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಜಿಲ್ಲೆಯಲ್ಲಿ ಚಿರಪರಿಚಿತರು. ಕೃತಿಗಳು: ಪ್ರಜಾ ರಕ್ಷಕರೇ ಭಕ್ಷಕರಾದರೇ..?, ಅಂತರಂಗದೊಳ್ ಚಿಗುರಲಿ ಶರಣರ ವಚನಾಮೃತಗಳು, ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ, ಸಂಸಾರದಲ್ಲಿ ಸಾಮರಸ್ಯ, ಸಮೃದ್ಧಿ ಜೀವನದಲ್ಲಿ ದಾರಿದೀಪಗಳು ...

READ MORE

Related Books