ಕನ್ನಡ ಸಾಹಿತ್ಯದಲ್ಲಿ ದ್ರೌಪದಿ ವೈ.ಕೆ ಸಂಧ್ಯಾ ಶರ್ಮ ಅವರ ಮಹಾಪ್ರಬಂಧವಾಗಿದೆ. ನಾನು ಇದನ್ನು ಪ್ರಾರಂಭಿಸಿದ ಕಾಲಕ್ಕೆ ಮಾಡುವವರೂ ಇರಲಿಲ್ಲ ಕೇಳುವವರೂ ಇರಲಿಲ್ಲ ಮಾಡುವುದರಿಂದ ಪ್ರಯೋಜನ ವೂ ಇರಲಿಲ್ಲ . ಆದರೆ ನಾನು ಓದುಗೂಳಿಯಾದುದರಿಂದ ಯಾವುದೇ ಕೆಲಸ ವಾಗಲೀ ಮಾಡದೇ ಬಿಡುತ್ತಿರಲಿಲ್ಲ . ಹೀಗಿದ್ದೂ ಇಷ್ಟೊಂದು ತಡವಾಯಿತೆಂದರೆ ಅದಕ್ಕೆ ವ್ಯವಹಾರ ಜ್ಞಾನ ದ ಕೊರತೆಯೇ ಕಾರಣ . ಸೂಕ್ಷ್ಮತೆ ಸಹ ಬೇಕು ಸರಳತೆ ಜೊತೆಗೆ ಮಾಡಿದೆವಾದರೆ ಬೆರಳನು ನೆಟ್ಟಗೆಹಿಡಿಯುವುದೇನನು ಹೇಗೆ ಎಂದು ಎಸ್ ವಿ ಪರಮೇಶ್ವರ ಭಟ್ಟರು ಬರೆಯುತ್ತಾರೆ ತಮ್ಮ ಇಂದ್ರಚಾಪ ಕವಿತೆ ಯಲ್ಲಿ . ಪರಿಷತ್ತು ಕೇವಲ 500 ಪ್ರತಿ ಗಳನ್ನು ಮುದ್ರಿಸಿ ಅವು ಬಹು ಬೇಗ ತೀರಿಹೋದರೂ ಎರಡನೇ ಮೂರನೇ ಮುದ್ರಣ ಗಳನ್ನು ಕಾಣುವಾಗಲೂ ತುಂಬಾ ತಡವಾಗಿತ್ತು . ಈ ಮುದ್ರಣವೂ ತಡವಾಗಿಯೇ ಬಂದಿದೆ . ಬಹು ಮಂದಿಗೆ ನಾನು ಇದರ ಜೆರಾಕ್ಸ್ ಹಾಳೆಗಳನ್ನು ಕಳಿಸಿದ್ದೇ ಹೆಚ್ಚು . ಮಹಾಭಾರತದ ದ್ರೌಪದಿ ತುಂಬಾ ಪ್ರಭಾವಶಾಲಿ ಎಂದು ಲೇಖಕಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.