ಲೇಖಕಿ ಡಾ. ಸವಿತಾ ಸಿರಗೋಜಿ ಅವರ ಪ್ರಬಂಧಗಳ ಕೃತಿ-ಸ್ವಚ್ಛಭಾರತ. ಹಗ್ಗ ಯೋಗ, ಶಿವನಾಮ, ಮಳೆಗಾಲದಲ್ಲೊಂದು ಬೇಸಿಗೆಕಾಲ, ಮೆಚ್ಚಿನ ಮಾರ್ಯಜಾಲಗಳು, ಹೊಸ ನೋಟುಗಳು ಮಾಡಿದ ಅವಾಂತರಗಳು, ರೈಲು ಮಾರ್ಗ...ಹೀಗೆ 27 ಪ್ರಬಂಧಗಳಿವೆ. ಸಾಮಾನ್ಯ ವಿಷಯಗಳನ್ನು ರಂಜನೀಯವಾಗಿಸಿದ್ದಾರೆ. ಎಲ್ಲ ಪ್ರಬಂಧಗಳು ವಸ್ಸೃತು, ನಿರೂಪಣಾ ಶೈಲಿಯಿಂದ ಓದುಗರ ಗಮನ ಸೆಳೆಯುತ್ತವೆ.
ಸವಿತಾ ಸಿರಗೋಜಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸುರಪುರದವರು. ತಂದೆ- ವೀರಣ್ಣ, ತಾಯಿ- ಮಾಣಿಕ್ಯಬಾಯಿ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಶೃಂಗಾರ ಶಾಯಿರಿಗಳು (ಕವನ ಸಂಕಲನ), ಮಹಾವೀರ(ಜೀವನ ಚರಿತ್ರೆ), ಎಂ.ಪಿ.ಜಾಲಿ (ವ್ಯಕ್ತಿ ಚಿತ್ರಣ), ಕುಂಭಕರ್ಣನ ಒಕ್ಕಲು(ಲಲಿತ ಪ್ರಬಂಧ) ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ...
READ MORE