‘ಸರಸ’ ಕೃತಿಯು ಎ. ಈಶ್ವರಯ್ಯ ಅವರ ಲಲಿತ ಪ್ರಬಂಧಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಸರಸದಲ್ಲಿ ನವುರಾದ ಜೀವನ ಚಿತ್ರಣವಿದೆ. ಸಂಸಾರದಲ್ಲಿ ಪ್ರೀತಿ ವಿಶ್ವಾಸವನ್ನು ಬೆಸೆಯಬಲ್ಲ ಶಕ್ತಿ ಅದರಲ್ಲಿದೆ. ಪ್ರಣಯದ ನಿಜವಾದ ಅರ್ಥ ಒದಗಿಸುವ, ಸರಸ ದಾಂಪತ್ಯದ ವಿವಿಧ ಆಯಾಮಗಳನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದೆ. ಸರಸದಲ್ಲಿ ಪ್ರೇಮ ಅದರಲ್ಲೂ ದಾಂಪತ್ಯದ ಚೌಕಟ್ಟಿನ ಪ್ರೇಮವೇ ಸ್ಥಾಯಿಯಾಗಿದೆ. ನಮ್ಮ ನಿತ್ಯ ಬದುಕನ್ನು ಒಂದು ಸೂತ್ರದಲ್ಲಿ ಬಂಧಿಸಿಡುವ ದಾಂಪತ್ಯ ಸಂಬಂಧಗಳ ನವುರಾದ ನೋಟವನ್ನು ಈಶ್ವರಯ್ಯ ಅಪ್ಯಾಯಮಾನವಾಗಿ ಕಟ್ಟಿಕೊಡುತ್ತಾರೆ. ಇದೇ ಅವರ ಬರಹದ ಶಕ್ತಿ. ದಾಂಪತ್ಯದಲ್ಲಿ ಸರಸ ವಿರಸ ಸಾಮಾನ್ಯ ಕ್ಷಣಾರ್ಧದಲ್ಲಿ ವಾಸ್ತವದಿಂದ ಕಲ್ಪನಾಲೋಕಕ್ಕೆ ಸೆಳೆದೊಯ್ಯಬಲ್ಲ ಶಕ್ತಿ ಈಶ್ವರಯ್ಯನವರ ಸರಸಕ್ಕಿದೆ. ಇದೊಂದು ದಾಂಪತ್ಯದ ನೀತಿ ಸಂಹಿತೆ ಎಂದು ವಿಶ್ಲೇಷಿಸಲಾಗಿದೆ.
ಎ. ಈಶ್ವರಯ್ಯ ಅವರು ಕಾಸರಗೋಡು ತಾಲ್ಲೂಕಿನ ಅನಂತಪುರದವರು. 1940 ಆಗಸ್ಟ್ 12 ರಂದು ಜನನ. 1973ರಲ್ಲಿ ಉದಯವಾಣಿ ಬಳಗದಿಂದ ಪ್ರಕಟವಾಗುವ ತುಷಾರ ಮಾಸಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಸಂಗೀತ, ಸಾಹಿತ್ಯ, ಫೊಟೋಗ್ರಫಿ, ಯಕ್ಷಗಾನ, ಹೀಗೆ ಹಲವು ವಿಷಯಗಳಲ್ಲಿ ಪರಿಣಿತರು. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂಗ್‌ಇಷ್ ಪದವಿ ಪಡೆದಿರುವ ಅವರು ಪತ್ರಿಕಾರಂಗಕ್ಕೆ ಪ್ರವೇಶ ಮಾಡುವ ಮೊದಲು ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ನಾಟಕ ಕಲಾವಿದರೂ ಆಗಿರುವ ಈಶ್ವರಯ್ಯ ಅವರು ಕು.ಶಿ ಹರಿದಾಸ ಭಟ್ಟರ ನಿರ್ದೇಶನದ ಇಂಗ್ಲೀಷ್ ನಾಟಕದಲ್ಲಿ ಅಭಿನಯಿಸಿದ್ದರು. 2018 ಡಿಸೆಂಬರ್ 30 ರಂದು ಮರಣ ಹೊಂದಿದರು.. ಪ್ರಶಸ್ತಿಗಳು : ಪೊಲ್ಯ ಯಕ್ಷಗಾನ ...
READ MORE