ಬೊಂಬಾಳ

Author : ಕಮಲಾ ಹಂಪನಾ

Pages 328

₹ 80.00




Year of Publication: 2009
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯಲ್ಲಿ ಸಂಶೋಧನೆ ವಿಮರ್ಶೆಗಳ ಜೊತೆಗೆ ಅವರ ವಿಶಿಷ್ಟ ವಿಚಾರಗಳು ಹಾಗೂ ಸಂಕೀರ್ಣ ಬರಹಗಳಿದ್ದು ವಿದ್ವತ್ ಮತ್ತು ಜನಪರ ಧೋರಣೆಗಳು ಒಂದುಗೂಡಿರುವ ಬರಹದ ಅನೇಕ ಮಾದರಿಗಳು ಇಲ್ಲಿ ದೊರೆಯುತ್ತವೆ. ಜೈನ ಸಾಹಿತ್ಯ, ಮಹಿಳಾ ಸಾಹಿತ್ಯ, ದಲಿತ ಸಾಹಿತ್ಯ, ಕುವೆಂಪು ಸಾಹಿತ್ಯದ ನೆಲೆಗಳಲ್ಲಿ ಈ ಕೃತಿಯು ಮುಖ್ಯವಾಗಿದೆ. ಈ ಕೃತಿಯಲ್ಲಿರುವ ಅಧ್ಯಾಯನಗಳೆಂದರೆ: ಸಂಶೋಧನೆ , ವಿಚಾರ , ವಿಮರ್ಶೆ , ಸಂಕೀರ್ಣ

About the Author

ಕಮಲಾ ಹಂಪನಾ
(28 October 1935)

ಲೇಖಕಿಯಾಗಿ ಚಿರಪರಿಚಿತರಾಗಿರುವ ಕಮಲಾ ಹಂಪನಾ ಅವರು ಪ್ರಾಕೃತ, ಜೈನಶಾಸ್ತ್ರದಲ್ಲಿ ಪರಿಣಿತರು. ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ 1935ರ ಅಕ್ಟೋಬರ್ 28 ರಂದು ಜನಿಸಿದರು. ತಂದೆ ಸಿ. ರಂಗಧಾಮನಾಯಕ್- ತಾಯಿ ಲಕ್ಷಮ್ಮ. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು ಬಿ.ಎ. ಆನರ್ಸ್ (1958) ಮಾಡಿದರು. ಕನ್ನಡ ಅಧ್ಯಾಪಕಿಯಾಗಿ (1959) ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ...

READ MORE

Related Books