‘ಬಾಡೂಟದ ಮಹಿಮೆ’ ಲೇಖಕ, ಛಾಯಾಗ್ರಾಹಕ ಕಲೀಮ್ ಉಲ್ಲಾ ಅವರ ಪ್ರಬಂಧ ಸಂಕಲನ. ಭಾರತದ ಸಾಂಸ್ಕೃತಿಕ ರಾಜಕಾರಣಗಳಲ್ಲಿ ಆಹಾರ ಪದ್ಧತಿಯೂ ಶೋಷಣೆಯ ಮೂಲವಾದ ನಿದರ್ಶನಗಳಿವೆ. ಮಾಂಸಾಹಾರದ ಬಗ್ಗೆ ಒಂದು ರೀತಿಯ ಅಪರಾಧಿ ಭಾವವನ್ನು ಜನರಲ್ಲಿ ತುಂಬಲಾಗುತ್ತದೆ. ಕರ್ನಾಟಕದ ಮಟ್ಟಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಂಸಾಹಾರ ಸೇವನೆ ನಿಷೇಧ ಎನಿಸುವಂತೆಯೂ ಬಿಂಬಿಸಲಾಗುತ್ತದೆ. ಇದು ಆಹಾರ ರಾಜಕಾರಣ ಎನ್ನಬಹುದು. ಇದೇ ಕಾರಣಕ್ಕೆ ಮಾಂಸಾಹಾರ ಒಂದು ವಿಶೇಷತೆಯನ್ನು ಪಡೆದುಕೊಳ್ಳುತ್ತದೆ ಎನಿಸುತ್ತದೆ. ಈ ಪುಸ್ತಕದಲ್ಲಿ ಕಲೀಮ್ ಉಲ್ಲಾ ಅವರು ಬಾಡೂಟದ ಸುತ್ತ ನಡೆವ ರಂಜನೆ, ಕೋಲಾಹಲ, ಕುತೂಹಲ, ಆಸೆ, ನಿರಾಶೆ ಎಲ್ಲವನ್ನು ತಮ್ಮ ಪ್ರಬಂಧಗಳಲ್ಲಿ ಸೆರೆ ಹಿಡಿದಿದ್ದಾರೆ.
ಕತೆಗಾರ, ಲೇಖಕ ಕಲೀಮ್ ಉಲ್ಲಾ ಅವರು ಚಿಕ್ಕಮಗಳೂರಿನ ಜಿಲ್ಲೆಯ ತರೀಕೆರೆಯವರು. ಪ್ರಸ್ತುತ ಶಿವಮೊಗ್ಗೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದು, ತೇಜಸ್ವಿ ಬರಹಗಳಿಂದ ಪ್ರಭಾವಿತರು. ಉತ್ತಮ ಛಾಯಾಗ್ರಾಹಕರು. ಚೊಚ್ಚಲ ಕೃತಿ ‘ಕ್ಲಾಸ್ ಟೀಚರ್’. ಪ್ರಜಾವಾಣಿಯಲ್ಲಿ ಪ್ರಕಟವಾದ ಅಂಕಣ ಬರಹಗಳ ಸಂಗ್ರಹ ಇದು; ಅವರ ಅನುಭವ ಕಥನವೂ ಹೌದು. ...
READ MORE