ಲೇಖಕರ ಬದುಕಿನಲ್ಲಿ ಕಂಡ ಪ್ರಜ್ಞಾಪೂರ್ವಕ ಮತ್ತು ಅಪ್ರಜ್ಞಾಪೂರ್ವಕ ಪುಟ್ಟ ಸಂಗತಿಗಳನ್ನು ತಮ್ಮ ಅನನ್ಯ ದೃಷ್ಟಿಕೋನದಲ್ಲಿ ಸೆರೆ ಹಿಡಿದು ಹೊರ ತಂದ ಲಲಿತ ಪ್ರಬಂಧಗಳ ಸಂಕಲನ ‘ಗುಬ್ಬಿ ಎಂಜಲು’.
ಕೃತಿಯಲ್ಲಿ 16 ಪ್ರಬಂಧಗಳಿದ್ದು ಅವುಗಳಲ್ಲಿ ಕೆಲವು ಬಾಲ್ಯವನ್ನು ನೆನಪಿಸಿದರೆ, ಹಲವು ಮಾಲ್ಗುಡಿ ಡೇಸ್ ನೆನಪಿಸುವಂತಹ ಸಮೃದ್ಧ ನೆನಪಿನ ಬರೆಹಗಳಿವೆ.
ಛಾಯಾಗ್ರಾಹಕ ಹಾಗೂ ಹವ್ಯಾಸಿ ಬರಹಗಾರರಾಗಿರುವ ಶಿವು ಅವರು ಜನಿಸಿದ್ದು 1975 ಡಿಸೆಂಬರ್ 24 ರಂದು. ಫೋಟೊಗ್ರಫಿನುರಿತರಾಗಿರುವ ಇವರು ಕ್ಲಿಕ್ಕಿಸಿದ ಛಾಯಾಚಿತ್ರಗಳಿಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಇವರು ಬರೆದ ಕೃತಿಗಳೆಂದರೆ ವೆಂಡರ್ ಕಣ್ಣು, ಗುಬ್ಬಿ ಎಂಜಲು, ಫೋಟೋ ಕ್ಲಿಕ್ಕಿಸುವ ಮುಂತಾದವು. ವೆಂಡರ್ ಕಣ್ಣು ಪುಸ್ತಕಕ್ಕೆ ದ.ರಾ.ಬೇಂದ್ರೆ ಪ್ರಶಸ್ತಿ ಮತ್ತು ಪಂಡಿತ ಪುಟ್ಟರಾಜ ಗವಾಯಿ ಪ್ರಶಸ್ತಿ ಲಬಿಸಿದೆ. ಇವರು ಬರೆದಿರುವ ಆಯಸ್ಸು ಕರಗುವ ಸಮಯದಲ್ಲಿ ಸಣ್ಣ ಕತೆಗೆ ಮಂಗಳೂರಿನ ಸನ್ಮಾರ್ಗ ಪತ್ರಿಕೆ ನಡೆಸಿದ ಸಣ್ಣ ಕತೆ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿದೆ. ...
READ MORE