ನಮ್ಮ ಮನೆ

Author : ಬಿ.ಕೆ. ತಿರುಮಲಮ್ಮ

Pages 20

₹ 28.00




Year of Publication: 2010
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 080-22203580/01/02

Synopsys

ನಮ್ಮ ಮನೆ- ಪ್ರಾಣಿ ಪಕ್ಷಿಗಳ ಮತ್ತು ಮನು‍ಷ್ಯನ ವಾಸಸ್ಥಳಗಳ ಪರಿಚಯ ಮಕ್ಕಳಿಗೆ ಮಾಡಿಕೊಡುತ್ತದೆ ಈ ಕೃತಿ. ಲೇಖಕಿ ಬಿ.ಕೆ.ತಿರುಮಲಮ್ಮ ರಚಿಸಿದ್ದಾರೆ. ಆಯಾ ಪ್ರಾಣಿ ಪಕ್ಷಿಗಳ ಪುಟ್ಟ ಪರಿಚಯದೊಂದಿಗೆ, ಅವುಗಳ ರೇಖಾ ಚಿತ್ರಗಳಿವೆ. ಮಕ್ಕಳು ಆ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲದೆ, ಮುಖಪುಟ ಹಾಗೂ ಹಿಂಬದಿಯ ರಕ್ಷಾಪುಟದಲ್ಲಿರುವ ಚಿತ್ರಗಳನ್ನು ಅನುಕರಿಸಿ ಅವುಗಳಿಗೆ ಬಣ್ಣ ತುಂಬಿಸಬಹುದು. ಈ ಪುಸ್ತಕ ಕೊಳ್ಳುವಾಗ ಮಕ್ಕಳಿಗೆ ಬಣ್ಣದ ಪೆನ್ಸಿಲುಗಳನ್ನೂ ಕೊಡಿಸಿ, ಅವರ ಚಟುವಟಿಕೆಯನ್ನು ಗಮನಿಸಲೂ ಸಹಕಾರಿಯಾಗಿದೆ.

About the Author

ಬಿ.ಕೆ. ತಿರುಮಲಮ್ಮ
(22 November 1922 - 02 September 2001)

ಬಿ.ಕೆ.ತಿರುಮಲಮ್ಮ ಅವರು 22-11-22ರಲ್ಲಿ ಜನಿಸಿದರು. ಇದು ಸುಂದರ ಸಂಖ್ಯೆಯಲ್ಲವೇ? ಅವರು ಸಂಖ್ಯೆಗಳನ್ನು ಪ್ರೀತಿಸುತ್ತಿದ್ದರು. ಪ್ರತಿ ಮಗುವೂ ಶಾಲೆಗೆ ಹೋಗುವಂತಾಗಬೇಕು, ಸಂಖ್ಯೆಗಳು ಮತ್ತು ಪದಗಳ ಪ್ರಪಂಚದ ಪರಿಚಯ ಅವರಿಗೆ ಆಗಬೇಕು ಎಂದು ಬಯಸಿದ್ದರು.  ಆದ್ದರಿಂದ ಅವರು 1953ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಶಿಶು ವಿಹಾರವನ್ನು ಸ್ಥಾಪಿಸಿದರು. ಮಕ್ಕಳಿಗೆ ಗಣಿತ ಮತ್ತು ವಿಜ್ಞಾನವನ್ನು ಸುಲಭವಾಗಿ ಕಲಿಸಲು ಅನೇಕ ಸರಳ ಪದ್ಯಗಳನ್ನು ಬರೆದರು. ‘ಕಂದಾ ಅಕ್ಷರ ಕಲಿ’ ‘ಕನ್ನಡ ಓದುವೆಯಾ’ ‘ನಮ್ಮ ಮನೆ’ ‘ಓದಿ ಕೇಳುವ ಕತೆಗಳು’ ‘ಪುಟಾಣಿಗಳ ವೈಜ್ಞಾನಿಕ ಕತೆಗಳು’ ‘ನಮ್ಮ ಬೆಂಗಳೂರು ಮತ್ತು ಪುಣ್ಯಕೋಟಿ’ ಇವು ಅವರ ಕೆಲವು ಕವಿತೆಗಳು. ಇವುಗಳನ್ನು ...

READ MORE

Related Books