‘ನೊಣನುಬಂಧ’ ಎಚ್. ಡುಂಡಿರಾಜ್ ಅವರ ಲಘು ಪ್ರಬಂಧ ಬರಹಗಳ ಸಂಕಲನ. ಕಳೆದ ನಲ್ವತ್ತು ವರ್ಷಕ್ಕೂ ಹೆಚ್ಚಿನ ಕಾಲದಿಂದ ಲಘು ಹಾಸ್ಯದ ಮೂಲಕ ಓದುಗರನ್ನು ಹಿಡಿದಿಟ್ಟಿರೋ ಡುಂಡಿರಾಜ್ ಅವರ ಪ್ರಬಂಧಗಳು ಅಷ್ಟೇ ಸೆಳೆತಗಳೊಂದಿಗೆ ಈ ಪುಸ್ತಕದಲ್ಲೂ ಸಂಕಲನಗೊಂಡಿವೆ. ನೊಣಾನುಬಂಧ ಅನ್ನೋ ಹೆಸರೇ ಸೂಚಿಸುವಂತೆ ಇದೊಂದು ಹಾಸ್ಯದ ಮೂಲಕ ವಿಶೇಷ ವಿಷಯಗಳನ್ನು ಅರ್ಥೈಸೋ ವಿಭಿನ್ನ ಪುಸ್ತಕ. ಓದುಗರಿಗೆ ಹಾಸ್ಯದೊಂದಿಗೆ ವಿಷಯ ತಲುಪಿಸುವಲ್ಲಿ ಈ ಪುಸ್ತಕ ಯಶಸ್ವಿಯಾಗುತ್ತದೆ ಎನ್ನಬಹುದು.
ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 2011ರಲ್ಲಿ ನಡೆದ ಸಂಯುಕ್ತ ಅರಬ್ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...
READ MORE