‘ಅಭಿವೃದ್ಧಿಯ ಸಾಮಾಜಿಕ ಆಯಾಮಗಳು’ ಟಿ.ಆರ್. ಚಂದ್ರಶೇಖರ ಅವರ ಪ್ರಬಂಧ ಸಂಕಲನ. ಈ ಕೃತಿಯಲ್ಲಿ ಅಭಿವೃದ್ಧಿ ಮತ್ತು ಅದರ ವಿವಿಧ ಮುಖಗಳನ್ನು ಕುರಿತಂತೆ ಚರ್ಚೆ ಮಾಡಿರುವ ಹನ್ನೆರಡು ಪ್ರಬಂಧಗಳಿವೆ. ಕಳೆದ 5-6 ವರ್ಷಗಳಲ್ಲಿ ವಿವಿಧ ವಿಚಾರ ಸಂಕಿರಣಗಳಿಗೆ ಮತ್ತು ನಿಯತಕಾಲಿಕೆಗಳಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಒಟ್ಟಿಗೆ ಸೇರಿಸಿ ಪ್ರಸ್ತುತ ಸಂಕಲನವನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಸಂಕಲನಗೊಂಡಿರುವ ಪ್ರಬಂಧಗಳ ನಡುವೆ ಒಂದು ಸಾಮಾನ್ಯ ವಿಚಾರ ಹರಿದಿರುವುದನ್ನು ಕಾಣಬಹುದು. ಬೇರೆ ಬೇರೆ ಸಂದರ್ಭಗಳಲ್ಲಿ ಅವು ರಚನೆಯಾಗಿದ್ದರೂ ಇಲ್ಲಿ ಅಭಿವೃದ್ಧಇಯ ಮೂಲ ಸ್ಥಾಯಿಯಾಗಿ ಎಲ್ಲ ಪ್ರಬಂಧಗಳನ್ನು ಹಕ್ಕುಗಳ ಪರಿಭಾಷೆಯಲ್ಲಿ ಚರ್ಚಿಸುವ ಒಂದು ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಟಿ.ಆರ್. ಚಂದ್ರಶೇಖರ್ ಅವರು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೂಡ ಆಗಿದ್ದರು. 2103ರಲ್ಲಿ ನಿವೃತ್ತರಾದ ನಂತರ ಬೆಂಗಳೂರು ನಿವಾಸಿಯಾಗಿದ್ದಾರೆ. ಅಭಿವೃದ್ಧಿ ಅದರ ಪರಿಕಲ್ಪನೆ ಹಾಗೂ ಯೋಜನೆಗಳ ಜಾರಿ, ನೀತಿ-ನಿರೂಪಣೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ವರದಿ ಸಿದ್ಧಪಡಿಸಿದ್ದಾರೆ. ...
READ MORE