‘ವಾಲ್ಮೀಕಿ ತೂಕಡಿಸಿದಾಗ ಮತ್ತು ಇತರ ಸಾಹಿತ್ಯ ಸಮೀಕ್ಷಾ ಪ್ರಬಂಧಗಳು’ ಗೌರೀಶ ಕಾಯ್ಕಿಣಿ ಅವರ ಕೃತಿ. ಇಲ್ಲಿ ಮೂರು ಭಾಗಗಳಲ್ಲಿ ಪ್ರಬಂಧಗಳು ಸಂಕಲನಗೊಂಡಿವೆ. ಮೊದಲ ಭಾಗವಾಗಿ ವಾಲ್ಮೀಕಿ ಯಾರು, ಆದಿಕವಿ ಏಕೆ, ಹೇಗೆ, ವಾಲ್ಮೀಕಿಯ ಕರುಣಾಯನ. ವಾಲ್ಮೀಕಿ ತೂಕಡಿಸಿದಾಗ-1, ವಾಲ್ಮೀಕಿ ತೂಕಡಿಸಿದಾಗ-2, ದಶರಥನ ಹೆಂಡಂದಿರು, ಅಹಲ್ಯೋದ್ಧಾರ, ಶೂರ್ಪಣಖೀ ಪ್ರಸಂಗ, ಪಂಪಾತೀರದ ಪುಷ್ಪಗಳು, ರಾಮಾಯಣದಲ್ಲಿ ಮಾನವೀಯ ಮೌಲ್ಯಗಳು ಪ್ರಬಂಧಗಳು ಸಂಕಲನಗೊಂಡಿದ್ದು ಎರಡನೇ ಭಾಗದಲ್ಲಿ ಕಾಲಿದಾಸ ನಾಮ ನಿಷ್ಪತ್ತಿ, ರಸರಾಜ ನಾಮ ನಿಷ್ಪತ್ತಿ, ರಸರಾಜ ಶೃಂಗಾರವಲ್ಲ, ಹಾಸ್ಯ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ, ತಿಥ್ಯಾದಿಗಳು ಅಪ್ರತ್ಯಕ್ಷವೇ, ಸತ್ಯಮೇವ ಜಯತೇ-ಒಂದು ಮೀಮಾಂಸೆ, ಭಗವಂತನ ಮೂಲ, ಸರ್ವಜ್ಞ ಕವಿಗೆ ಆ ಹೆಸರು ಏಕೆ, ಸೌಂದರ್ಯ: ಒಂದು ವಿಕೃತಿ, ಅಗ್ನಿಹಂಸ, ಇಂದು ಶೇಷನ ಬಾರಿ, ಗುರುವಾದ ಮತ್ತು ಗುರು ಅರವಿಂದರು, ಹೊಸ ಧಾರ್ಮಿಕತೆಯ ಆಹ್ವಾನ ಪ್ರಬಂಧಗಳು ಸಂಕಲನಗೊಂಡಿವೆ.
ಸಾಹಿತಿ ಗೌರೀಶ್ ಕಾಯ್ಕಿಣಿ ಅವರು 1912 ಸೆಪ್ಟೆಂಬರ್ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು. ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು. ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು. ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...
READ MORE