‘ಪ್ರಾಚೀನ ಕರ್ನಾಟಕದಲ್ಲಿ ನಾಟಕ ಪರಂಪರೆ’ ಬಸವರಾಜ ಮಲಶೆಟ್ಟಿ ಅವರ ಪ್ರಬಂಧ ಸಂಕಲನ. ಉತ್ತರ ಕರ್ನಾಟಕದ ಬಯಲಾಟಗಳು ಎಂಬ ವಿಷಯ ಕುರಿತು ಪಿ.ಎಚ್.ಡಿ ಮಹಾಪ್ರಬಂಧ ರಚಿಸುವ ಸಂದರ್ಭದಲ್ಲಿ ಸಿಕ್ಕ ಮಾಹಿತಿಗಳನ್ನು ಈ ಪ್ರಬಂಧಗಳಲ್ಲಿ ದಾಖಲಿಸಿದ್ದಾರೆ.
ಗೋವಿಂದ ಪೈ ಅವರ ಅಭಿಪ್ರಾಯಗಳು, ಮುಳಿಯ ತಿಮ್ಮಪ್ಪಯ್ಯನವರ ವಿಚಾರಗಳು, ನಾಟಕ-ಒಂದು ನೃತ್ಯ ವಿಶೇಷ, ನಾಟಕ-ಒಂದು ನೃತ್ಯ ರೂಪಕ, ನಾಟಕದ ನಟಿ, ಲಾಕ್ಷಣಿಕರ ಮತ, ನಾಟಕಶಾಲೆ, ನಾಟಕ-ಒಂದು ಅಧ್ಯಯನದ ವಿಷಯ, ಕನ್ನಡ ಕವಿಗಳಿಗೆ ಸಂಸ್ಕೃತ ನಾಟಕದ ಪರಿಚಯ, ನಟ್ಟುವ-ನಟ, ಪಾತ್ರ, ಕನ್ನಡದಲ್ಲಿ ನಾಟಕಗಳು ರಚನೆಗೊಳ್ಳಲಿಲ್ಲ, ಮತ್ತು ಸಹಾಯಕ ಸಾಹಿತ್ಯ ಹೀಗೆ ವಿವಿಧ ವಿಷಯವಾಗಿ ಪ್ರಬಂಧಗಳಿವೆ.
ಜಾನಪದ ತಜ್ಞರಾಗಿದ್ದ ಡಾ. ಬಸವರಾಜ ಮಲಶೆಟ್ಟಿ ಅವರು ಉತ್ತರ ಕರ್ನಾಟಕದ ಬಯಲಾಟಕ್ಕೆ ವಿಶಿಷ್ಟ ಸ್ಪರ್ಶ ನೀಡಿದವರು. ರಂಗಭೂಮಿ, ಸಂಗೀತ ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿದ್ದ ಮಲಶೆಟ್ಟಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡೊಳ್ಳಿಯವರು. ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಅವರು ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ಬಸವರಾಜ ಮಲಶೆಟ್ಟಿಯವರು ಜನಿಸಿದ್ದ 1949ರ ಆಗಸ್ಟ್ 10ರಂದು ತಂದೆ ಮರಿಕಲ್ಲಪ್ಪ, ತಾಯಿ ನಾಗೇಂದ್ರವ್ವ. ಬಾಲ್ಯದ ದಿನಗಳಲ್ಲಿಯೇ ರಂಗಭೂಮಿಯ ಒಡನಾಟ ಆರಂಭವಾಯಿತು. ತಂದೆಯ ಜೊತೆಯಲ್ಲಿ ಆಟಕ್ಕೆ ಹೋಗುತ್ತಿದ್ದ ಬಸವರಾಜ ಅವರು ಬಯಲಾಟದಲ್ಲಿ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ...
READ MORE