ಹೊಂಬಿಸಿಲು

Author : ಅಂತಃಕರಣ

Pages 148

₹ 110.00




Year of Publication: 2018
Published by: ಮಡಿಲು ಪ್ರಕಾಶನ
Address: ನಂ. 77, 2ನೇ ಮುಖ್ಯರಸ್ತೆ, ಐಶ್ವರ್ಯ ನಗರ, ಕುವೆಂಪು ನಗರ ಎನ್, ಬ್ಲಾಕ್, ಮೈಸೂರು -570023
Phone: 9844212231

Synopsys

‘ಹೊಂಬಿಸಿಲು’  ಕಿಶೋರ ಸಾಹಿತಿ ಅಂತಃಕರಣ ಅವರ ಪ್ರಬಂಧ ಬರಹಗಳ ಸಂಕಲನ.  ಲೋಕದ ಯಾರದೇ-ಯಾವುದೇ ದೊಡ್ಡಸ್ತಿಕೆಗಳು ಯಾರಿಗೂ ಅಡ್ಡಿಯಾಗಕೂಡದೆಂದು ಆಲೋಚಿಸುತ್ತಾ ಬೆಳೆಯುತ್ತಿರುವ ಹುಡುಗ ಅಂತಃಕರಣ. ಆಟ, ಪಾಠ, ನಾಟಕ, ಕಾವ್ಯ, ದಿನ-ವಾರ ಪತ್ರಿಕೆಗಳ ಅಂಕಣಗಳಲ್ಲಿಯೂ  ಅದನ್ನೆ ಹಲವು ಬಗೆಯಲ್ಲಿ ಹೆಣೆಯುತ್ತಾ ಹೊರಟಿರುವ ಬರಹಗಾರ.

ಆಟ, ಪುಸ್ತಕ, ಸಿನಿಮಾ, ಮತ್ತಿತರೆ ಸಂಗತಿಗಳ ಬಗೆಗೆ ನೂರಾರು ಅಂಕಣಗಳಲ್ಲಿ ಸಾಮಾಜಿಕ ನೋಟವನ್ನು ಕಟ್ಟುವ ಪಯಣದಲ್ಲಿದ್ದಾನೆ ಎನ್ನುವುದೇ ನನ್ನಂತಹವರಿಗೆ ಹೆಮ್ಮೆ ಎನ್ವುತ್ತಾರೆ ಹಿರಿಯ ಸಂಶೋಧಕರಾದ ಡಾ. ಆರ್. ಚಲಪತಿ. ನಮ್ಮಂತಹವರು ಮಾಡಲಾರದ್ದೇನನ್ನೋ ಮಕ್ಕಳು ಮಾಡಲು ಹೊರಟದ್ದನ್ನು ನೋಡುವುದೂ, ಬೆನ್ನು ತಟ್ಟಿ ಮುನ್ನಡೆಯಿರೆನ್ನುವುದೂ ನಮ್ಮ ಹೊಣೆ ಎಂಬುದು ಅವರ ಅಭಿಪ್ರಾಯ. ಸದ್ಯ ಹೈಸ್ಕೂಲು ವ್ಯಾಸಂಗ ಮಾಡುತ್ತಿರುವ ಅಂತಃಕರಣ ಈವರೆಗೆ ಸುಮಾರು 30 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈ ಸಂಕಲನದಲ್ಲಿಯೂ ಆಟ, ಪಾಠ, ಸಿನಿಮಾ ಸೇರಿದಂತೆ ಹಲವಾರು ವಿಷಯಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ. ಯುವ ತಲೆಮಾರೊಂದು ತನ್ನ ಸುತ್ತಲಿನ ಸಮಾಜಕ್ಕೆ ಸ್ಪಂದಿಸುವ, ಗ್ರಹಿಸುವ ಇಂಥಹ ಕಾರ್ಯಗಳು ಹೆಚ್ಚಾಗಬೇಕು ಎನ್ನುತ್ತಾರೆ ಅವರು.

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books