ಕೆದಂಬಾಡಿ ಜತ್ತಪ್ಪ ರೈ ಅವರನ್ನು ಕನ್ನಡದ ಓದುಗ ಮರೆಯುವುದೆಂತು? ಬೇಟೆಯ ನೆನಪುಗಳು, ಬೇಟೆಯ ಉರುಳು, ಈಡೊಂದು ಹುಲಿಯೆರಡು, ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ- ಇಂತಹ ಅಮೂಲ್ಯ ಕೃತಿಗಳಿಂದ ಕನ್ನಡಿಗರಿಗೆ ಬೇಟೆ ಸಾಹಿತ್ಯದ ರುಚಿ ಮತ್ತು ಹುಚ್ಚು ಹಿಡಿಸಿದ ಹಿರಿಯ ಲೇಖಕರಿವರು. ಆಗಲೇ ಒಮ್ಮೆ ಮುದ್ರಣವಾಗಿದ್ದ ಈ – ಬೇಟೆಗಾರನ ಹುಲಿಹೆಜ್ಜೆ ಎಂಬ ಬೇಟೆ ಪರಿಸರದ ಅನುಭವ ಪ್ರಬಂಧಗಳ ಸಂಗ್ರಹದ ಓದಿನ ಮಜವೇ ಬೇರೆ. ಹೀಗೆ, ನಾಲ್ಕು ವಿಭಿನ್ನವೂ ರುಚಿಪೂರ್ಣವೂ ಜ್ಞಾನಭರಿತವೂ ಎನಿಸುವ ಕೃತಿಗಳು ನಿಮ್ಮ ಮನರಂಜಿಸಲಿ!
©2024 Book Brahma Private Limited.