ಕತೆಗಾರರೂ, ಬರಹಗಾರರೂ ಆದ ವಸುಧೇಂದ್ರರು ಬರೆದಿರುವ ಕೃತಿ ’ನಮ್ಮಮ್ಮ ಅಂದ್ರೆ ನಂಗಿಷ್ಟ’.2006 ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 2019 ಹತ್ತೊಂಬತ್ತನೇ ಮುದ್ರಣವನ್ನೂ ಕಂಡಿತು.
ಸುಲಲಿತ ಪ್ರಬಂಧ ಸಂಕಲನಗಳಾದ ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಕೃತಿಯು ಮಕ್ಕಳಾಗಿ ಹುಟ್ಟಿದ ಕ್ಷಣದಲ್ಲಿ ಅತ್ತ ಮೊದಲ ಅಳುವಿನಿಂದ ಹಿಡಿದು ಅಮ್ಮನನ್ನೇ ಅಳಿಸುವಷ್ಟು ದೊಡ್ಡವರಾದ ತನಕ ಘಟಿಸಿದ ಘಟನೆಗಳನ್ನು ಲೇಖಕ ವಸುಧೇಂದ್ರ ಅವರು ಈ ಬರಹಗಳ ಮೂಲಕ ಬಿತ್ತರಿಸಿದ್ಧಾರೆ.
ಚಡ್ಡಿಯಲ್ಲೇ 'ಗಲೀಜು' ಮಾಡಿಕೊಂಡು ಸಕಲರಿಂದಲೂ ಅಸ್ಪೃಷ್ಯನಾಗಿ ಅಳಹತ್ತಿದ ಮಗನನ್ನು ರಮಿಸುವ ಅಮ್ಮ, ಸ್ಟೀಲ್ ಪಾತ್ರೆಗಳನ್ನು ಬಂಗಾರವೆಂಬಂತೆ ಪ್ರೀತಿಸುವ ಅಮ್ಮ, ಬೈದ ಮಗನೆದುರು ಕುಳಿತು "ನೀನು ನಂಗೆ ಬೈದುಬಿಟ್ಟಿ" ಎಂದು ಮುಗ್ಧವಾಗಿ ಕಣ್ಣೀರಿಡುವ ಅಮ್ಮ, ಅಪರಿಚಿತ ಬೆಂಗಳೂರಿನ ಬೀದಿಯಲ್ಲಿ ಕಳೆದುಹೋಗುವ ಅಮ್ಮ, ಕೊನೆಗೆ ಶೌಚಾಲಯಕ್ಕೆ ಹೋದಷ್ಟೇ ಸಲೀಸಾಗಿ ಜಗತ್ತನ್ನೇ ಬಿಟ್ಟುಹೋದ ಅಮ್ಮ,ತಿಳಿಯದಂತೆ ಅಮ್ಮನೆಡೆಗೆ ಅದೆಂತಹಾ ಉತ್ಕಟ ಪ್ರೀತಿಯನ್ನು ನವಿರಾಗಿ ತಿಳಿಸಿ ಓದುಗರ ಭಾವ ಲೋಕಕ್ಕೆ ಮತ್ತಷ್ಟು ಹತ್ತಿರವಾಗುವ ಲೇಖಕರ ಈ ಕೃತಿ ಹಲವು ಬಗೆಯ ಅಮ್ಮನ ಮನಸ್ಸುಗಳನ್ನು ತಿಳಿಸುವಂತದ್ದು.
ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಹುಮಾನ ಲಭಿಸಿದೆ.
ವಸುಧೇಂದ್ರ ಅವರು ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು. ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1969ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಆನಂತರ ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಯ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ. ಸುಮಾರು 20 ವರ್ಷಗಳ ಕಾಲ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅವರು ಸದ್ಯ ಬೆಂಗಳೂರಿನಲ್ಲಿ ವಾಸವಿದ್ದು, ಸದ್ಯಕ್ಕೆ ಸಾಹಿತ್ಯಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ ...
READ MORE