ಲೇಖಕ ಎಚ್. ಶಾಂತರಾಜ ಐತಾಳ್ ಅವರು ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಜನತೆಗೆ, ಓದುಗರಿಗೆ ಚಿರಪರಿಚಿತರು. ಹಾಸ್ಯ ಪ್ರವೃತ್ತಿಯನ್ನು ಹೊರಹಾಕುವ ಇವರ ಅನೇಕ ಬರಹಗಳು ಸರಳ ವಿನೋದದಿಂದಲೂ, ಸಹಜವಾಗಿರುವಂತದ್ದು.
ದಯವಿಟ್ಟು ಮುಚ್ಚಬೇಡಿ ರಸ್ತೆ ಹೊಂಡಗಳನ್ನು, ಪುನರಪಿ ಜನನಂ, ಬಲಿ ಚಕ್ರವರ್ತಿಯ ಅಜ್ಜ , ಒಂದು ಟೂತ್ ಬ್ರಷ್ ನ ಹುಡುಕಾಟದಲ್ಲಿ, ಡಿಂಪಲ್ ಹೋಗಿ ರಿಂಕಲ್ ಬಂದಾಗ, ಜೋಕೆ ! ಹಾಗಲ್ಲ ಹೀಗೆ ಅಂತ ಹೇಳ್ಬೇಡಿ, ನಾಲ್ಕನೇ ಕ್ಲಾಸಿನ ಟೀಚರ್, ಅನುಕರಣಾ ಪ್ರಿಯರು, ಲಗಣಾ ಆದ್ರ ಆರಾಮ, ಐದೂವರೆ ಗಂಟೆ, ನಿದ್ರಾ ವಿಹೀನಂ, ಪ್ರವಾಸದಲ್ಲೂ ಅಧ್ಯಯನ ನಿರತರು, ಯಾರಿಗೆ ಬೇಡ ಸನ್ಮಾನ, ಮಣ್ಣಾದ್ರೂ ಸಿಕ್ತಲ್ಲ, ಮ್ಯಾಟ್ರಿಕ್ ದಾಗ ನಮ್ಮ ಜಿಲ್ಲೆ ಫಸ್ಟ್, ಬಾಪೂಜಿಯ ಕಪಿತ್ರಯರು, ನರಕಕ್ಕೂ ಪರ್ಮಿಟೆ, ಹೊಸ ಮನವಿಯ ಸೇರ್ಪಡೆ ಮುಂತಾದ ಲೇಖನ ಬರಹಗಳು ’ ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು’ ಕೃತಿಯಲ್ಲಿ ಕಾಣಬಹುದು.
ವಿನೋದ ಪ್ರವೃತ್ತಿಯ ಬರೆಹಗಾರ ಎಚ್. ಶಾಂತರಾಜ್ ಐತಾಳ್ ಅವರು ಮೂಲತಃ ಉಡುಪಿಯವರು. ಹುಟ್ಟಿದ್ದು 1942 ಜೂನ್ 03ರಂದು. ‘ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು, ವಿವಾಹ ಭೋಜನವಿದು’ ಅವರ ಲಲಿತ ಪ್ರಬಂಧ ಕೃತಿಗಳು. ಸುಹಾಸಂ ಹಾಸ್ಯಪ್ರಿಯರ ಮತ್ತು ಲೇಖಕರ ಸಂಘನೆಯ ಅಧ್ಯಕ್ಷರಾಗಿದ್ದಾರೆ. 2015ರಲ್ಲಿ ಅವರ ‘ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು’ ಕೃತಿಗೆ ಲಲಿತ ಪ್ರಬಂಧ ವಿಭಾಗದಲ್ಲಿ ಕನ್ನಡ ಪುಸ್ತಕ ಬಹುಮಾನ ಲಭಿಸಿದೆ. ...
READ MOREಲಲಿತ ಪ್ರಬಂಧ-2015