ಲೇಖಕ ಶ್ರೀನಿವಾಸ ಜಾಲವಾದಿ ಅವರ ಲಲಿತ ಪ್ರಬಂಧಗಳ ಸಂಕಲನ-ಮಿಸ್ಸಳ ಭಾಜಿ ಹಾಗೂ ಇತರ ಲಲಿತ ಪ್ರಬಂಧಗಳು. ಹೆಂಡ್ತಿ ಮತ್ತು ರಸ್ತೆ, ಮಿಸ್ಸಳಭಾಜಿ, ಮೂಗೇ ಏನು ಹೇಳಲಿ ನಿನ್ನ ಮಹಿಮೆ, ಗಂಡಗಬರೂ, ಎಲ್ಲಾರು ಮಾಡುವುದು ಹೊಟ್ಟೆಗಾಗಿ, ನಾಯಿನಸೀಟು, ಕಪಾಳಮೋಕ್ಷ ಹೀಗೆ ಒಟ್ಟು 22 ಲಲಿತ ಪ್ರಬಂಧಗಳಿವೆ. ಬಹುತೇಕ ಪ್ರಬಂಧಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಸಂಕ್ರಮಣ‘ ಬಹುಮಾನವನ್ನೂ ಪಡೆದಿವೆ.
ಖ್ಯಾತ ನಾಟಕಕಾರ ಎಲ್.ಬಿ.ಕೆ. ಆಲ್ದಾಳ್ ಅವರು ಕೃತಿಗೆ ಮುನ್ನುಡಿ ಬರೆದು ‘ಪ್ರಬಂಧಗಳ ಶೈಲಿ ಲಾಲಿತ್ಯಪೂರ್ಣ ಹಾಗೂ ಹರಿತವಾಗಿದೆ. ವ್ಯಂಗ್ಯ ಶೈಲಿಯ ಅವರ ಬರಹ ನಗಿಸುತ್ತದೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿಕೊಳ್ಳಲು ಹೇಳುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಶ್ರೀನಿವಾಸ ಜಾಲವಾದಿ ಅವರು ಜನಿಸಿದ್ದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿಯಲ್ಲಿ. ಇವರ ಸ್ವಂತ ಊರು ಜಾಲವಾದಿ. 1988 ರಿಂದ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ವಾಸವಿದ್ದಾರೆ. ಬಿ.ಎ. ಬಿ.ಈಡಿ ಪದವೀಧರರು. ಸದ್ಯ, ಸುರಪುರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲರಾಗಿ ನಿವೃತ್ತರು. .ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆಯ ಸಂಚಾಲಕರು. ಸುರಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ‘ಕಲಾ ಮಾಧ್ಯಮ ವಿಜಾಪುರದಿಂದ ‘ತಿರುಗುಪ್ಪ’ ನಾಟಕವನ್ನು ದೆಹಲಿ, ಮುಂಬಯಿ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರದರ್ಶನ ಹಾಗೂ ಬೆಂಗಳೂರು ದೂರದರ್ಶನದಿಂದ ನಾಟಕ ಪ್ರಸಾರ. ಖ್ಯಾತ ನಿರ್ದೇಶಕ ಟಿ.ಎಸ್.ರಂಗಾ ಅವರ ನಿರ್ದೇಶನದ ‘ಮೌನಕ್ರಾಂತಿ’ ಗೆ ಸಂಭಾಷಣೆ, ನಟ ಹಾಗೂ ...
READ MORE