ಕತೆಗಾರರಾದ ಮಲ್ಲಿಕಾರ್ಜುನ ಹಿರೇಮಠ ಅವರು ಬರೆದಿರುವ ಲಲಿತ ಪ್ರಬಂಧಗಳ ಸಂಕಲನ ’ಮೂರು ಸಂಜೆ ಮುಂದ ಧಾರವಾಡ’.
ಈ ಕೃತಿಯಲ್ಲಿನ ಬಹುತೇಕ ಪ್ರಬಂಧಗಳ ವೊಇನ್ಯಾಸದಲ್ಲಿ ಕಥನ ಶೈಲಿಯಿದೆ ಎನ್ನಬಹುದು. ಕಾವ್ಯದ ಲಯಗಾರಿಕೆ ಮತ್ತು ನವಿರಾದ ಹಾಸ್ಯದ ಜೊತೆಗೆ ಹರಿತ ವಿಚಾರವೂ ಇದೆ. ಕೆಲವು ಕಡೆ ವರದಿ ರೂಪದ ಸಾಲುಗಳನ್ನೂ ಗಮನಿಸಬಹುದು. ಇಳಿಸಂಜೆಯ ಹೊಂಬೆಳಕಿನಲ್ಲಿ, ಮುಂಜಾನೆಯ, ನಡುಹಗಲಿನ ಅನುಭವದ ಅನೃಕ ಮಗ್ಗುಲುಗಳನ್ನು ಇಲ್ಲಿರುವ ಪ್ರಬಂಧಗಳು ಅನಾವರಣಗೊಳಿಸುತ್ತವೆ.
ಮೊಬೈಲಾಯಣ, ಆದರ್ಶ ಶಿಕ್ಷಕನಿಗೆ ಸನ್ಮಾನ, ಸರ್ಪಹುಣ್ಣು, ಹಿಂದಿನ ಸಾಲಿನವರು ಮೊದಲಾದ ಬರಹಗಳಲ್ಲಿ ಲೇಖಕರ ವೈಯಕ್ತಿಕ ಅನುಭವಗಳನ್ನು ಕಾಣಬಹುದು. ಸಾಮಾಜಿಕ ನಡವಳಿಕೆಗಳು, ಸಂಬಂಧಗಳು, ಪರಿಣಾಮಗಳು ಇವುಗಳತ್ತ ಸೂಕ್ಷ್ಮವಾಗಿ ಗ್ರಹಿಸುವ ಬರಹಗಳನ್ನು ಈ ಕೃತಿ ಒಳಗೊಂಡಿದೆ.
ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು. ‘ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು. ಅವರ ಸಾಹಿತ್ಯ ಸೇವೆಗೆ ‘ಕನಾಟಕ ...
READ MORE