‘ವಿದೇಶದ ತಿಳಿವಳಿಕೆಗಳು’ ಕೃತಿಯು ಬಿ.ಎಚ್. ಶ್ರೀಧರ ಅವರ ಗ್ರಂಥವಾಗಿದೆ. ಎಂಬ ಪ್ರಸ್ತುತ ಗ್ರಂಥವು ಮೊದಲು ಶ್ರೀ ವಿ. ಎಮ್. ಮಿರ್ಜಾರವರ “ಕರ್ನಾಟಕ ಧುರೀಣ”ದಲ್ಲಿ ಖಂಡಶಃ ಪ್ರಕಟವಾಗಿ ಆನಂತರ ಪುಸ್ತಕ ರೂಪದಲ್ಲಿ ಪ್ರಸಿದ್ಧವಾಗುತ್ತಿದೆ. ಅದರ ಗ್ರಂಥಕರ್ತರು ಶ್ರೇಷ್ಠ ಕವಿಗಳೂ ಜನಪ್ರಿಯ ವಾಗ್ಮಿಗಳೂ ವಿಚಾರವನ್ನು ಕೆಣಕಿ ಸಮಾಧಾನ ಪಡಿಸಬಲ್ಲ ಪ್ರಬಂಧಕಾರರೂ ಆಗಿ ಆಗಲೇ ಮೈಸೂರು ರಾಜ್ಯದ ಎಲ್ಲಡಿಯ ಕನ್ನಡಿಗರಿಗೂ ಸುಪರಿಚಿತರಾದವರು. ಗ್ರಂಥದಲ್ಲಿ ಪ್ಲೇಟೋವಿನಿಂದ ಹಿಡಿದು ರಸೆಲ್ ಡ್ಯೂಯಿಗಳ ವರೆಗಿನ ಖ್ಯಾತನಾಮ ತತ್ವಜ್ಞಾನಿಗಳ ರಾಜಕೀಯ, ಆರ್ಥಿಕ ಹಾಗೂ ನೈತಿಕ ಸುಧಾರಣಾಪರ ವಿಚಾರಗಳನ್ನು ಸಂಕ್ಷೇಪತಃ ಕಾಣಬಹುದು. ಭಾಷೆಯ ಸರಳತೆಯೂ ವಾಕ್ಯಗತಿಯ ನೇರವಾದ ಓಟವೂ ವಿಚಾರಗಳ ಧಾರಾವಾಹಿತ್ರವೂ ಗ್ರಂಥದಲ್ಲಿ ಎದ್ದು ಕಾಣುವ ಗುಣಗಳು. ಮೈಸೂರು ಅಭಿನವ ವಿಜಯನಗರ ಕರ್ನಾಟಕವಾಗಿ ರೂಪುಗೊಳ್ಳುತ್ತಿರುವ ಕನ್ನಡಿಗರ ಈ ವರ್ಧಮಾನ ದಶೆಯಲ್ಲಿ ಪ್ರಸ್ತುತ ಬರೆಹವೂ ಪ್ರಜಾಕೋಟಯ ವಿಜಾರನಿಪಾಸೆಯನ್ನು, ನಿವಾರಿಸುವುದರಲ್ಲಿ ಮೊದಲ ಹೆಜ್ಜೆಯನ್ನಿಟ್ಟ ಪ್ರಯತ್ನಗಳಲ್ಲಿ ಒಂದಾಗಿ ನಿಂತಿರುವುದು ಅಭಿನಂದನೀಯ ಎನ್ನುತ್ತದೆ ಈ ಕೃತಿ.
©2024 Book Brahma Private Limited.