‘ವಜನು ಕಟ್ಟು’ ಲೇಖಕ ವಿಜಯಕಾಂತ ಪಾಟೀಲರ ಪ್ರಬಂಧ ಸಂಕಲನ. ಇಲ್ಲಿ ಒಂಬತ್ತು ಪ್ರಬಂಧಗಳಿವೆ. ಈ ಒಂಬತ್ತು ಪ್ರಬಂಧಗಳು "ಸವಿಬಂಧಗಳು "ಎಂದು ಲೇಖಕರು ಹೇಳಿಕೊಂಡಿದ್ದಾರೆ, ಅಜ್ಜ, ಅಜ್ಜಿ, ಕಾಕ, ನಾಯಿ, ಸ್ವಗ್ರಾಮವೂ ಸೇರಿದಂತೆ ಪಾಪು, ಚಂಪಾ ಅವರೂ ಇಲ್ಲಿ ಪ್ರಬಂಧಕಾರನ ಲೇಖನಿಗೆ ಆತ್ಮೀಯವಾಗಿಯೂ ವಿಮರ್ಶೆಯ ಮಾನದಂಡದಿಂದಲೂ ಅಳೆದು ತೂಗಿಸಿಕೊಂಡು ಅನಾವರಣಗೊಂಡಿದ್ದಾರೆ. ಆಡುಭಾಷೆಯ ಅಥವಾ ಹಳ್ಳಿತನದ ಸಹಜ ಸೊಗಡು ಇಲ್ಲಿನ ಪ್ರಬಂಧಗಳ ಓದಿನ ಓಟಕ್ಕೆ ಪುಷ್ಠಿ ಒದಗಿಸಿ ಲೇಖಕನ ಲೀಲಾಜಾಲ ನಡಿಗೆಯನ್ನು ಅಚ್ಚರಿಯಿಂದ ಮೆಚ್ಚುಗೆಯಿಂದ ನೋಡುವಂತೆ ಮಾಡುತ್ತವೆ. ಆಡುಮಾತಿನ ಹತ್ತುಹಲ ಹೊಸಪದ ಬಳಕೆಯೂ ಈ ಸಂಕಲನಕ್ಕೆ ಹೊಸ ಮೆರಗು ತಂದಿದೆ. ಪ್ರಬಂಧಕಾರರ ನೇರ , ನಿಷ್ಟುರ ಮಾತಿನಂತೆಯೇ ಇಲ್ಲಿನ ಪ್ರಬಂಧಗಳೂ ಮೈದಳೆದು ಈ ಸಂಕಲನಕ್ಕೆ ವಿಭಿನ್ನ ಆಯಾಮವೊಂದರ ರೂಪು ನೀಡಿದೆ.
©2024 Book Brahma Private Limited.