ಲೇಖಕಿ ಸುನಂದಾ ಬೆಳಗಾಂವಕರ ಅವರ ಪ್ರಬಂಧಗಳ ಸಂಕಲನ ’ ಕಾಕ ಭುಶುಂಡಿ ಮತ್ತು ಇತರೆ ಪ್ರಬಂಧಗಳು’. ಇಲ್ಲಿ ಚಿತ್ರಿತಗೊಂಡಿರುವ ಕಾಳಿ ಬೆಳ್ಳಿ ಹಸುಗಳು, ಕಾಕಭುಶುಂಡಿ, ಗುಂಡ್ಯಾ ಎಂಬ ಬೆಕ್ಕು, ಇಣಚಿ ಸಂಸಾರ, ನಾಗಪ್ಪ, ಗುಬ್ಬಿಗಳು, ಮುರಿಗೆವ್ವನೆಂಬ ಹಾಲೂಡುವ ಎಮ್ಮೆ, ಟಾಮ್ ತಿಮ್ಮನೆಂಬ ವಿಶಿಷ್ಟ ನಾಯಿ, ಮಂಗ-ಮಂಗಿಯರು ಗೂಗೆಪ್ಪ ಓದುತ್ತಾ ಹೋದಂತೆ ಕೇವಲ ಪ್ರಾಣಿ-ಪಕ್ಷಿಗಳೆನಿಸದೆ ಮನುಷ್ಯ ಜೀವಗಳೇ ಅನಿಸುವಷ್ಟು ಆಪ್ತವಾಗುತ್ತದೆ.
ಅನೇಕ ರಾಗಭಾವಗಳ ರಂಗಶಾಲೆಯೇ ಇಲ್ಲಿ ಅನಾವರಣಗೊಳ್ಳುತ್ತದೆ. ಇದೇ ಈ ಪ್ರಬಂಧಗಳ ಪ್ರಮುಖ ವಸ್ತುಗಳಾಗಿವೆ. ಪ್ರಾಣಿಪಕ್ಷಿಗಳ ಜೀವನವನ್ನು ತಮ್ಮ ಜೀವನದ ಅನುಭವದ ಕಥನದ ಒಳನೇಯ್ಕೆಯಲ್ಲಿ ನಿರೂಪಿಸಿರುವ ಕ್ರಮವನ್ನೂ ಇಲ್ಲಿ ಕಾಣಬಹುದು.
©2024 Book Brahma Private Limited.